Saturday, November 23, 2024

ಗಂಡು ಹೆಣ್ಣು ಎರಡೂ ಜನನಾಂಗ ಹೊಂದಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ!

ಹೈದರಾಬಾದ್ : ಅಪರೂಪದಲ್ಲೇ ಅಪರೂಪದ ಪ್ರಕರಣವೊಂದರಲ್ಲಿ ಹೆಣ್ಣು ಮತ್ತು ಗಂಡಿನ ಜನನಾಂಗಳೆರಡನ್ನೂ ಹೊಂದಿದ್ದ ವ್ಯಕ್ತಿಯೊಬ್ಬರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೆಣ್ಣಿನ ಜನನಾಂಗವನ್ನು ತೆಗೆದು ಹಾಕಿರುವ ಘಟನೆ ಹೈದರಾಬಾದ್‌ ಕಿಮ್ಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದಿದೆ.

ಹೊಟ್ಟೆ ನೋವಿನ ಕಾರಣದಿಂದ 40 ವರ್ಷದ ವ್ಯಕ್ತಿಯೊಬ್ಬರು ಇತ್ತೀಚೆಗೆ ಹೈದರಾಬಾದ್‌ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ನೋವಿನಿಂದ ಬಳಲುತ್ತಿದ್ದರು. ಈ ವ್ಯಕ್ತಿಗೆ ಮದುವೆಯಾಗಿ ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಕಿಮ್ಸ್ ವೈದ್ಯರು ಅಲ್ಟ್ರಾಸೌಂಡ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಈ ವ್ಯಕ್ತಿಗೆ ನಡೆಸಿದಾಗ ಎರಡು ಜನನಾಂಗಗಳು ಇರುವುದು ಕಂಡುಬಂದಿದೆ. ನಂತರ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸ್ತ್ರೀ ಜನನಾಂಗವನ್ನು ತೆಗೆದು ಹಾಕಲಾಗಿದೆ. ವ್ಯಕ್ತಿಯಲ್ಲಿ ಶಿಶ್ನವು ಸಾಮಾನ್ಯವಾಗಿದ್ದರೂ, ವೃಷಣಗಳು ಹುಟ್ಟಿನಿಂದಲೇ ಹೊಟ್ಟೆಯಲ್ಲಿ ಉಳಿದುಕೊಂಡಿವೆ.

ಇದನ್ನೂ ಓದಿ: ಚಂದ್ರಯಾನ ಟೀಕಿಸಿದ ಪ್ರಕಾಶ್ ರೈ ದೇಶ ಬಿಟ್ಟು ಹೋಗಲಿ: ಶೋಭಾ ಕರಂದ್ಲಾಜೆ

ಜೊತೆಗೆ ಗರ್ಭಾಶಯ, ಫಾಲೋಪಿಯನ್ ಟ್ಯೂಬ್‌ಗಳು ಮತ್ತು ಸ್ತ್ರೀ ಜನನಾಂಗದ ಭಾಗ ಮಹಿಳೆಯರಿಗೆ ಇರುವ ಜಾಗದಲ್ಲೇ ಇದ್ದವು. ಆದರೆ, ಅವುಗಳು ಹೊಟ್ಟೆಯ ಒಳಭಾಗದಲ್ಲೇ ಇದ್ದವು. ಹೀಗಾಗಿ ಅದು ಈವರೆಗೂ ಗೊತ್ತಾಗಿರಲಿಲ್ಲ.

ಲ್ಯಾಪ್ರೋಸ್ಕೋಪಿಕ್ ವಿಧಾನ ಬಳಸಿ ವೃಷಣಗಳನ್ನು ಹೊರತೆಗೆದು, ಫಾಲೋಪಿಯನ್ ಟ್ಯೂಬ್, ಗರ್ಭಕೋಶ, ಹೆಣ್ಣಿನ ಜನನಾಂಗವನ್ನು ದೇಹದಿಂದಲೇ ತೆಗೆದುಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES