Friday, November 22, 2024

777 ಚಾರ್ಲಿಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

ಬೆಂಗಳೂರು : ರಕ್ಷಿತ್ ಶೆಟ್ಟಿ ನಟನೆ ಹಾಗೂ ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ದೊರೆತಿದೆ.

ಕೇಂದ್ರ ಸರ್ಕಾರ ನೀಡುವ 69ನೇ ರಾಷ್ಟ್ರೀಯ ಚಲನಚಿತ್ರ  ಪ್ರಶಸ್ತಿ ಘೋಷಣೆಯಾಗಿದೆ. ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕಾಗಿ ಮೀಸಲಿಟ್ಟ ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ 777 ಚಾರ್ಲಿ ಪಾಲಾಗಿದೆ.

ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಅನಿರುದ್ಧ ಜತ್ಕರ್ ನಿರ್ದೇಶನದ ಬಾಳೆ ಬಂಗಾರ ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ಸಿನಿಮಾ ಪ್ರಶಸ್ತಿಯು ಪಾಲಾಗಿದೆ. ಬಾಳೆ ಬಂಗಾರದಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಸಿನಿ ಬದುಕಿನ ಕಥೆ ಕಾಣಬಹುದು.

ಕನ್ನಡಕ್ಕೆ ನಾಲ್ಕು ಪ್ರಶಸ್ತಿ

ಇನ್ನೂ ಆಯುಷ್ಮಾನ್​ಗೆ ಅತ್ಯುತ್ತಮ ಅನ್ವೇಷಣೆ ವಿಭಾಗ ಹಾಗೂ ಹಿರಿಯ ಚಲನಚಿತ್ರ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯಗೆ ಸಿನಿಮಾ ವಿಮರ್ಶೆ ಜ್ಯೂರಿ ಪ್ರಶಸ್ತಿ ಲಭಿಸಿದೆ. ಆ ಮೂಲಕ ಕನ್ನಡಕ್ಕೆ ಒಟ್ಟು ನಾಲ್ಕು ಪ್ರಶಸ್ತಿ ಲಭಿಸಿದೆ.

2021ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳಲ್ಲಿ ಅತ್ಯುತ್ತಮವಾದ ಸಿನಿಮಾ, ನಟ-ನಟಿ ಹಾಗೂ ತಂತ್ರಜ್ಞರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗುತ್ತಿದೆ. ಕೊರೋನಾ ಕಾರಣದಿಂದಾಗಿ 2021ರಲ್ಲಿ ಬಿಡುಗಡೆಯಾಗಿರುವ ಸಿನಿಮಾಗಳಿಗೆ ಪ್ರಶಸ್ತಿ ಘೋಷಣೆ ಆಗಿರಲಿಲ್ಲ. ಇದೀಗ ಆ ವರ್ಷ ರಿಲೀಸ್ ಆಗಿರುವ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಘೋಷಿಸಲಾಗಿದೆ.

ಇವರೇ ಪ್ರಶಸ್ತಿ ಮುಡಿಗೇರಿಸಿಕೊಂಡವರು

  • RRR : ಅತ್ಯುತ್ತಮ ಜನಪ್ರಿಯ ಸಿನಿಮಾ
  • 777 ಚಾರ್ಲಿ : ಉತ್ತಮ ಕನ್ನಡ ಸಿನಿಮಾ
  • ಬಾಳೇ ಬಂಗಾರ ಸಾಕ್ಷ್ಯ ಚಿತ್ರಕ್ಕೆ ಪ್ರಶಸ್ತಿ
  • ಕನ್ನಡದ ಸುಬ್ರಮಣ್ಯ ಬಾದೂರ್​ಗೆ ಪ್ರಶಸ್ತಿ
  • ಅಲ್ಲುಅರ್ಜುನ್​ : ಅತ್ಯುತ್ತಮ ನಟ
  • ಗಂಗೂಬಾಯಿ ಚಿತ್ರಕ್ಕೆ ಆಲಿಯಾ ಭಟ್​ಗೆ ಪ್ರಶಸ್ತಿ
  • ಆಲಿಯಾ ಭಟ್​, ಕೃತಿ ಸನೋನ್ : ಅತ್ಯುತ್ತಮ ನಟಿ
  • ಪಲ್ಲವಿ ಜೋಶಿ : ಅತ್ಯುತ್ತಮ ಪೋಷಕ ನಟಿ
  • ಶ್ರೇಯಾ ಘೋಷಾಲ್​​ : ಅತ್ಯುತ್ತಮ ಗಾಯಕಿ
  • ಸರ್ದಾರ್ ಉದ್ಧವ್ ಸಿಂಗ್ : ಉತ್ತಮ ಹಿಂದಿ ಸಿನಿಮಾ
  • ದಿ ಕಾಶ್ಮೀರ ಫೈಲ್ಸ್​ಗೆ ನರ್ಗಿಸ್ ದತ್ ಪ್ರಶಸ್ತಿ
  • ಪಂಕಜ್ ತ್ರಿಪಾಠಿ : ಅತ್ಯುತ್ತಮ ಪೋಷಕ ನಟ
  • ದೇವಿಶ್ರೀ ಪ್ರಸಾದ್ : ಅತ್ಯುತ್ತಮ ನಿರ್ದೇಶಕ
  • ಸಂಜಯ್​ ಲೀಲಾ ಬನ್ಸಾಲಿ : ಅತ್ಯುತ್ತಮ ಸಂಕಲನಕಾರ

RELATED ARTICLES

Related Articles

TRENDING ARTICLES