Monday, December 23, 2024

ಸಿ-ವೋಟರ್ ಸಮೀಕ್ಷೆಯಲ್ಲಿ ಮತ್ತೆ NDAಗೆ ಅಧಿಕಾರ

ನವದೆಹಲಿ : 2024ರ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿ-ವೋಟರ್ ಸಮೀಕ್ಷೆ ಬಹಿರಂಗಪಡಿಸಿದೆ.

ಎನ್​ಡಿಎ(NDA) 306 ಸೀಟು, I.N.D.I.A. ಒಕ್ಕೂಟ 193 ಹಾಗೂ ಇತರರು 44 ಸೀಟುಗಳನ್ನು ಪಡೆಯಲಿದ್ದಾರೆ. ಬಿಜೆಪಿ(BJP) 287, ಕಾಂಗ್ರೆಸ್ 74, ಇತರರು 182 ಸ್ಥಾನ ಪಡೆಯಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಟೈಮ್ಸ್​ ನೌ ಸಮೀಕ್ಷೆ ಪ್ರಕಾರ ಎನ್​ಡಿಎ 296ರಿಂದ 326 ಸೀಟು, I.N.D.I.A. ಒಕ್ಕೂಟ 160ರಿಂದ 190, ಬಿಜೆಡಿ 12ರಿಂದ 14 ಹಾಗೂ ಇತರರು 11ರಿಂದ 14 ಸೀಟುಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದೆ.

ಇನ್ನೂ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಎನ್​ಡಿಎ 25 ಸ್ಥಾನ, ಕಾಂಗ್ರೆಸ್ ಕೇವಲ 1 ಸ್ಥಾನ ಪಡೆದುಕೊಂಡಿತ್ತು.

ಒಟ್ಟು ಬಲಾಬಲ : 543

ಪ್ರಸ್ತುತ ಬಲ : 540

ಎನ್​ಡಿಎ (NDA) : 340

ಇಂಡಿಯಾ (I.N.D.I.A) : 140

ಇತರೆ : 60

ಬಹುಮತ : 271

RELATED ARTICLES

Related Articles

TRENDING ARTICLES