Monday, December 23, 2024

ಚಿರತೆ ದಾಳಿಗೆ ಹಸು ಬಲಿ

ಮೈಸೂರು : ಚಿರತೆ ದಾಳಿಯಿಂದ ರೈತನೊರ್ವನ ಹಸು ಸಾವನ್ನಪ್ಪಿರುವ ಘಟನೆ ಸಾಲಿಗ್ರಾಮ ತಾಲೂಕು ಕಾವಲ್ ಹೊಸೂರು ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಮತ್ತೆ ಚಿರತೆಯೊಂದು ಹಸು ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಗ್ರಾಮದ ರಾಜೇಶ್ವರಿ ಪ್ರಸನ್ನ ಎಂಬುವವರಿಗೆ ಸೇರಿದ್ದ ಹಸು ಕೊಟ್ಟಿಗೆಯಲ್ಲಿತ್ತು. ಈ ವೇಳೆ ಚಿರತೆ ಹಸು ಮೇಲೆ ದಾಳಿ ಮಾಡಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ಎಳೆದುಕೊಂಡು ಹೋಗಿದೆ. ಹಸುವನ್ನುಕಳೆದುಕೊಂಡ ರೈತನ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನು ಓದಿ : ಹೃದಯಾಘಾತದಿಂದ ಪೋಲಿಸ್ ಕಾನ್ಸಟೇಬಲ್ ಸಾವು

ಆ ಗ್ರಾಮದಲ್ಲಿ ಅಷ್ಟೇ ಅಲ್ಲದೆ ಕಾವಲು ಹೊಸೂರು, ಚಿಕ್ಕಬೇರ್ಯ, ಸಂಭ್ರವಳ್ಳಿ, ಹೊಸಾಗ್ರಹಾರ ಹಾಗೂ ಗುಳುವಿನ ಅತ್ತಿಗುಪ್ಪೆ ಗ್ರಾಮಗಳಲ್ಲಿಯೂ ಚಿರತೆಗಳ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆ ಕುರಿಗಳು, ನಾಯಿ ಹಾಗೂ ಹಸುಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಹೊಸೂರು ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಬೋನ್ ಅಳವಡಿಸಬೇಕು ಎಂದು ಗ್ರಾಮದ ಜನರು ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES