Sunday, December 29, 2024

ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ ಸಾವು

ಹಾಸನ : ಕಲುಷಿತ ನೀರನ್ನು ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಘಟನೆ ಅರಕಲಗೂಡು ತಾಲೂಕಿನ ಬಿಸಿಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಉಮಾ (48) ಮತ್ತು ನಂಜುಂಡಪ್ಪ (55) ಮೃತ ದಂಪತಿ. ಆಗಸ್ಟ್ 15 ರಂದು ಮನೆಯಲ್ಲಿ ಊಟ ಮಾಡಿದ ಬಳಿಕ ಅಸ್ವಸ್ಥಗೊಂಡಿದ್ದರು. ಈ ಹಿನ್ನೆಲೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚಿಕಿತ್ಸೆ ಪಡೆದು ನಿನ್ನೆ ಇಬ್ಬರೂ ಆಸ್ಪತ್ರೆಯಿಂದ ಮನೆಗೆ ತೆರಳುವ ವೇಳೆ ದಂಪತಿಗಳು ದಿಡೀರ್ ಸಾವನ್ನಪ್ಪಿದ್ದಾರೆ.

ಇದನ್ನು ಓದಿ : ಕರೆಯದೇ ಬಂದವನನ್ನ… ಅಂತಾರೆ : BSY ವ್ಯಂಗ್ಯವಾಡಿದ ಕೃಷ್ಣಬೈರೇಗೌಡ

ತಕ್ಷಣ ದಂಪತಿಗಳ ಹಠಾತ್ ಸಾವಿನ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದ್ದ ಅವರ ಮೃತರ ಪುತ್ರ.

ಇಂದು ಮೃತರ ಅಂತ್ಯಕ್ರಿಯೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಗ್ರಾಮಕ್ಕೆ ಬಂದು ಅಂತ್ಯಕ್ರಿಯೆ ತಡೆದ ಪೋಲಿಸರು. ಈ ಹಿನ್ನೆಲೆ ಪ್ರಶ್ನೆ ಮಾಡಿದ ಕುಟುಂಬಸ್ಥರ ಮನವೊಲಿಸಿ ಬಳಿಕ ಮೃತದೇಹಗಳನ್ನು ಮರಣ್ತೋತ್ತರ ಪರೀಕ್ಷೆಗೆ ಕೊಂಡೊಯ್ದರು. ಸದ್ಯ ಅಸಹಜ ಸಾವು ಎಂದು ತನಿಖೆ ನಡೆಸುತ್ತಿರುವ ಕೊಣನೂರು ಪೋಲಿಸರು.

RELATED ARTICLES

Related Articles

TRENDING ARTICLES