Sunday, January 19, 2025

ಚಂದ್ರಯಾನ-3 ಸಕ್ಸಸ್.. ನಟ ಚೇತನ್ ವಿವಾದಾತ್ಮಕ ಪೋಸ್ಟ್

ಬೆಂಗಳೂರು : ಚಂದ್ರಯಾನ-3 ಯಶಸ್ವಿಗೆ ದೇಶಾದಂತ್ಯ ಸಂಭ್ರಮಾಚರಣೆ ನಡೆಯುತ್ತಿದೆ. ಆದರೆ, ನಟ ಚೇತನ್ ಅಹಿಂಸಾ ಅವರು ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ.

ಚಂದ್ರಯಾನ-3 ಯಶಸ್ಸಿನ ಕೀರ್ತಿ ಇಸ್ರೋ ವಿಜ್ಞಾನಿಗಳಿಗೋ ಅಥವಾ ತಿರುಪತಿ ತಿಮ್ಮಪ್ಪನಿಗೋ? ಎಂದು ಪೋಸ್ಟ್ ಹರಿಬಿಟ್ಟಿದ್ದಾರೆ. ಇದಕ್ಕೆ ನೆಟ್ಟಿಗರು ಖಾರವಾಗಿಯೇ ಕಾಮೆಂಟ್​ಗಳನ್ನು ಹರಿಬಿಟ್ಟಿದ್ದಾರೆ.

ನಿನಗೆ ಜನ್ಮ ನೀಡಿದ ಶ್ರೇಯ ಯಾರಿಗೆ ಸಲ್ಲಬೇಕು ಎಂಬುದನ್ನು ಮೊದಲು ದೃಢಪಡಿಸು. ಆ ಶ್ರೇಯ ಇಬ್ಬರಿಗೂ ಸಿಕ್ಕಿದರೆ, ಅದೇ ರೀತಿ ಇಂದಿನ ಚಂದ್ರಯಾನ-3 ಶ್ರೇಯ ಇಬ್ಬರಿಗೂ ಸಿಗಬೇಕು. ದೈವ ಬಲ ಇಲ್ಲದೆ ಯಾವುದೂ ಇಲ್ಲ ಎನ್ನುವ ದೇಶ ನಮ್ಮದು.ಅಷ್ಟಕ್ಕೂ ನೀನು ವಿದೇಶಿ ಪ್ರಜೆ. ನಿನಗೆ ಭಾರತೀಯತೆಯ ಅರಿವಿಲ್ಲ ಎಂದು ಕಿಡಿಕಾರಿದ್ದಾರೆ.

ಪೋಸ್ಟ್​ನಲ್ಲಿ ಏನಿದೆ?

ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ. ಈ ಯಶಸ್ಸಿನ ಕೀರ್ತಿ ಅಥವಾ ಗುರುತು ಯಾರಿಗೆ ಸಲ್ಲುತ್ತದೆ? ನಮ್ಮ ವಿಜ್ಞಾನಿಗಳಿಗೆ ಅಥವಾ ‘ಲಾರ್ಡ್’ ತಿರುಪತಿಗೆ? ಎಂದು ವಿವಾದ ಹುಟ್ಟಿಸುವ ಪೋಸ್ಟ್ ಮಾಡಿದ್ದಾರೆ.

ಇಡೀ ಭರತ ಖಂಡದ ವಿಜ್ಞಾನಿಗಳಿಗೆ ಸಲ್ಲಿಸುತ್ತಾರೆ. ವಿಜ್ಞಾನಿಗಳು ಅತ್ಯಂತ ವಿನಮ್ರತೆಯಿಂದ ತಿರುಪತಿ ತಿಮ್ಮಪ್ಪನಿಗೆ ಸಲ್ಲಿಸುತ್ತಾರೆ. ಜೈ ಹೋ.. ಎಂದು ನೆಟ್ಟಿಗರು ತಿರುಗೇಟು ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES