Saturday, January 18, 2025

ವೀರಾಂಜನೇಯ ದೇಗುಲಕ್ಕೆ ಕನ್ನ, ಗ್ರಾಮಸ್ಥರಿಂದ ಧರ್ಮದೇಟು

ಮಂಡ್ಯ : ದೇವಸ್ಥಾನದ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕನಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮಸ್ಥರು ಕಳ್ಳನನ್ನ ರೆಡ್ ಹ್ಯಾಂಡ್ ಆಗಿ  ಹಿಡಿದು ಧರ್ಮದೇಟು ಕೊಟ್ಟಿದ್ದಾರೆ. ಗ್ರಾಮದ ವೀರಾಂಜನೇಯ ಸ್ವಾಮಿ ದೇವಸ್ಥಾನದ ಕಳ್ಳತನಕ್ಕೆ ಯತ್ನ ಮಾಡಿದ್ದು, ಮೈಸೂರು ಮೂಲದ ಮುಬಾರಕ್ ಗ್ಯಾಂಗ್​​ನಿಂದ ಕಳ್ಳತನಕ್ಕೆ ಯತ್ನ ನಡೆದಿದೆ.

ದೇವಸ್ಥಾನದ ಬೀಗ ಮುರಿದು ಕಳ್ಳತನ ಮಾಡುವಾಗ ವಿಚಾರ ತಿಳಿದು ಗ್ರಾಮಸ್ಥರು ದೇವಸ್ಥಾನವನ್ನು ಸುತ್ತುವರಿದಿದ್ದಾರೆ. ಕಳ್ಳರನ್ನ ಶರಣಾಗುವಂತೆ ಗ್ರಾಮಸ್ಥರ ಸೂಚನೆ ನೀಡಿದ್ದಾರೆ. ನಂತರ ಗ್ರಾಮಸ್ಥರಿಗೆ ಹೆದರಿ ಕಳ್ಳರು ಓಡಿಹೋಗಿದ್ದಾರೆ. ಕಳ್ಳರ ಗ್ಯಾಂಗ್​​​ನಲ್ಲಿ ಓರ್ವನನ್ನ ಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.

ಮುಬಾರಕ್​​ನನ್ನ ಹಿಡಿದು ಗ್ರಾಮಸ್ಥರು ಥಳಿಸಿದ್ದಾರೆ. ಸ್ಥಳಕ್ಕೆ ಪಾಂಡವಪುರ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಪಾಂಡವಪುರ ಠಾಣೆ ಪೊಲೀಸರು ಕಳ್ಳನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES