Thursday, December 19, 2024

ಇವರೇ… ಇಸ್ರೋ ಸಾಧನೆಯ ಹಿಂದಿನ ದಿಗ್ಗಜರು

ಬೆಂಗಳೂರು : ಕೋಟ್ಯಂತರ ಮನಸ್ಸುಗಳ ಹಾರೈಕೆ ಫಲವಾಗಿ ವಿಕ್ರಮ್ ಲ್ಯಾಂಡರ್ ‘ಚಂದಮಾಮ’ನ ಊರಿಗೆ ತಲುಪಿದೆ. ಈ ಅಮೃತ ಕ್ಷಣದ ಹಿಂದಿನ ಇಸ್ರೋ ದಿಗ್ಗಜರ ಪರಿಶ್ರಮ ಬಣ್ಣಿಸಲಾಗದು.

ಹೌದು, ಚಂದ್ರಯಾನ-2 ಯೋಜನೆಯ ವಿಫಲತೆ. ಕೋವಿಡ್ ಸಂಕಷ್ಟ. ಈ ನಡುವೆಯೂ ಕಳೆದ 4 ವರ್ಷಗಳಲ್ಲಿ ಇಸ್ರೋ ವಿಜ್ಞಾನಿಗಳು ಭಾರತೀಯರ ಕನಸು ಸಾಕಾರಗೊಳಿಸಲು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ. ಆ ತೆರೆಮರೆಯ ಸಾಧಕರುಗಳು ಇವರೇ ನೋಡಿ.

  • ಎಸ್​. ಸೋಮನಾಥ್, ಇಸ್ರೋ ಅಧ್ಯಕ್ಷ
  • ವೀರಮುತ್ತುವೇಲ್, ಯೋಜನಾ ನಿರ್ದೇಶಕ
  • ಕಲ್ಪನಾ, ಚಂದ್ರಯಾನ ತಂಡದ ನಾಯಕಿ
  • ಎಂ. ವನಿತಾ, ಯುಆರ್ ರಾವ್ ಉಪಗ್ರಹ ಕೇಂದ್ರದ ಉಪ ನಿರ್ದೇಶಕಿ
  • ಎಂ. ಸಂಕರನ್, ಉಪಗ್ರಹಕ್ಕೆ ವಿದ್ಯುತ್ ಪೂರೈಕೆ ತಂತ್ರಜ್ಞಾನದ ಪರಿಣಿತ

ಆದಿತ್ಯ ಎಲ್ 1 ಆರಂಭಿಸುತ್ತೇವೆ

ಇಸ್ರೋ ಅಧ್ಯಕ್ಷ ಸೋಮನಾಥ್ ಮಾತನಾಡಿ, ಆದಿತ್ಯ ಎಲ್ 1 ಮುಂದಿನ ತಿಂಗಳು ಆರಂಭಿಸುತ್ತೇವೆ ಎಂದು ಹೇಳಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಇದು ಅಷ್ಟು ಸುಲಭವಾಗಿರಲಿಲ್ಲ. ಎರಡು ಮೀಟರ್ ಪರ್ ಸೆಕೆಂಡ್​ಗೂ ಕಡಿಮೆ ವೆಲಾಸಿಟಿಯಲ್ಲಿ ಲ್ಯಾಂಡ್ ಆಗಿದೆ. ಪ್ರತಿಯೊಬ್ಬ ಭಾರತೀಯನೂ ಈ ಯಶಸ್ಸಿಗಾಗಿ ಹರಸಿದ್ದರು ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES