Thursday, December 19, 2024

ಚಂದ್ರಯಾನ ಸಕ್ಸಸ್​​ಗೆ ಶಾಲಾ ಮಕ್ಕಳಿಂದ ವಿಶೇಷ ಪೂಜೆ!

ದಾವಣಗೆರೆ : ಚಂದ್ರಯಾನ 3 ಸುರಕ್ಷಿತವಾಗಿ ಲ್ಯಾಂಡಿಂಗ್ ಆಗುವಂತೆ ದಾವಣಗೆರೆಯ ಶಾಮನೂರು ತಿಮ್ಮಾರೆಡ್ಡಿ ಇಂಟರ್​ ನ್ಯಾಷನಲ್​ ಶಾಲಾ ಆಡಳಿತ ಮಂಡಳಿ ಮಕ್ಕಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇಶದ ಕೋಟ್ಯಾಂತರ ಮಂದಿಯ ಬಾರಿ ನಿರೀಕ್ಷೆಯ ಚಂದ್ರಯಾನ 3 ಇಂದು ಚಂದ್ರನ ಮೇಲ್ಮೇಯನ್ನು ಸ್ಪರ್ಷಿಸಲಿದೆ. ಇದೇ ವೇಳೆ ದಾವಣಗೆರೆ ಶಾಮನೂರಿನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಶಾಲಾ ಮಕ್ಕಳಿಂದ ಕುಂಕುಮಾರ್ಚನೆ, ವಿಶೇಷ ಅಭಿಷೇಕ ಮಾಡಿ ಚಂದ್ರಯಾನ ಸಕ್ಸಸ್​ ಗೆ ಪೂಜೆ ಸಲ್ಲಿಸಲಾಯಿತು.

ಇದನ್ನೂ ಓದಿ: ನೆಹರು ತಾರಾಲಯದಲ್ಲಿ ಚಂದ್ರಯಾನ 3 ವೀಕ್ಷಣೆಗೆ ಅವಕಾಶ!

ವಿಜ್ಞಾನಕ್ಕೆ ದೈವದ ಅನುಗ್ರಹ ಇರಲಿ ಎಂಬ ಕಾರಣಕ್ಕೆ ಕಳೆದ ಬಾರಿಯ ನೋವು ಮರುಕಳಿಸದಂತೆ ವಿಜ್ಞಾನಿಗಳ ಪರವಾಗಿ ಪೂಜೆ ಸಲ್ಲಿಸಿದ ಶಾಲಾ ಮಕ್ಕಳು ದೇವಸ್ಥಾನದ ಹೊರಗಡೆ ಸಿಹಿ ಹಂಚಿ ಶುಭ ಹಾರೈಸಿದರು.

RELATED ARTICLES

Related Articles

TRENDING ARTICLES