Sunday, December 22, 2024

ಕಾಂಗ್ರೆಸ್​ನಲ್ಲಿ ಫ್ರೀ ಬರ್ಡ್ ಆಗಿ ಓಡಾಡ್ತಿದ್ರು : ರಾಮಲಿಂಗರೆಡ್ಡಿ

ದಾವಣಗೆರೆ : ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹೋದವರಿಗೆ ಉಸಿರು ಕಟ್ಟದ ವಾತಾವರಣ ಇದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಕುಟುಕಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ‌ ಪಕ್ಷದಲ್ಲಿ ಫ್ರೀ ಬರ್ಡ್ ಆಗಿ ಓಡಾಡುತ್ತಿದ್ದರು. ಈಗ ಮತ್ತೆ ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದು ಘರ್ ವಾಪಸಿ ಸುಳಿವು ನೀಡಿದ್ದಾರೆ.

ನಾನು ಸಚಿವನಾಗಿದ್ದಾಗ ಬಸ್ ನಿಲ್ದಾಣ ನಿರ್ಮಾಣಕ್ಕೆ ಪ್ರಪೊಸಲ್ ಕಳಿಸಲಾಗಿತ್ತು. ಸ್ನಾರ್ಟ್ ಸಿಟಿ 75% ಹಣ, ರಾಜ್ಯ ಸರ್ಕಾರದ್ದು 25% ಅನುದಾನದಲ್ಲಿ ನಿರ್ಮಾಣವಾಗುತ್ತದೆ. ಎಲೆಕ್ಟ್ರಾಟ್ರಿಕ್ ಬಸ್​ಗಳನ್ನು ತೆಗೆದುಕೊಳ್ಳುತ್ತೇವೆ. ಅದಕ್ಕೆ ಪ್ರಪೋಸಲ್​ಗಳನ್ನು ಕೂಡ ಕಳಿಸುತ್ತೇವೆ ಎಂದು ಹೇಳಿದ್ದಾರೆ.

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಕ್ಕೆ ನಷ್ಟ ಆಗುವುದಿಲ್ಲ. ಈಗಾಗಲೇ ಡಾಟಾಗಳನ್ನು ನಮ್ಮ ನಾಲ್ಕು ನಿಗಮದ ಎಂಡಿಗಳು ನೀಡಿದ್ದಾರೆ. ಇನ್ನು ನಿಗಮಗಳಿಗೆ ಹಣ ಬಿಡುಗಡೆ ಮಾಡುವುದು ಇದೆ. ಎಂಡಿಗಳು ಡಾಟಾ ನೀಡದ ನಂತರ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಬಸ್ ಬಗ್ಗೆ ಕೇಳು ಅಂದ್ರೆ ಚಂದ್ರಯಾನ ಅಂತಿಯಲ್ಲ

ಚಂದ್ರಯಾನ-3 ಲ್ಯಾಂಡಿಂಗ್ ಬಗ್ಗೆ ಸುದ್ದಿಗಾರರು ಕೇಳಿದಾಗ, ಬಸ್ ಬಗ್ಗೆ ಕೇಳು ಅಂದ್ರೆ ಚಂದ್ರಯಾನ ಅಂತಿಯಲ್ಲ ಎಂದು ಸಚಿವ ಎಸ್.ಎಸ್ ಮಲ್ಲಿಕಾರ್ಜುನ್‌ ಉಡಾಫೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ಚಂದ್ರಯಾನಕ್ಕೆ ನೆಹರು ಅವರ ಕಾಲದಲ್ಲಿ ಬುನಾದಿ ಹಾಕಿದ್ದು, ಇಂದು ಚಂದ್ರಯಾನ ಹೋಗಿ ಇಳಿಯುತ್ತಿದೆ‌. ಕಷ್ಟಪಟ್ಟು ಸೇವೆ ಸಲ್ಲಿಸಿದ ವಿಜ್ಞಾನಿಗಳು ಸೇರಿದಂತೆ ಎಲ್ಲರಿಗೂ ಅಭಿನಂಧನೆ ತಿಳಿಸುತ್ತೇನೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES