Wednesday, January 22, 2025

ಸಿಲಿಕಾನ್​ ಸಿಟಿ ಪೊಲೀಸರಿಗೆ ತಲೆನೋವಾದ ಕ್ಯೂಆರ್​​ ಕೋಡ್​ ವಂಚನೆಗಳು!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ  ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು ಹೊಸ ಹೊಸ ರೀತಿಯ ಸೈಬರ್ ಕ್ರೈಮ್​ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದು ಪೊಲೀಸ್​ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಇತ್ತೀಚೆಗೆ ಎಲ್ಲೆಡೆ ಡಿಜಿಟಲ್ ಕ್ರಾಂತಿಯಿಂದಾಗಿ ಸ್ಮಾರ್ಟ್​ ಪೇಮೆಂಟ್​ ಆಪ್ಷನ್​ ಗೆ ಎಲ್ಲರು ಹೆಚ್ಚು ಒಗ್ಗಿಕೊಂಡಿದ್ದಾರೆ. ಅದರಲ್ಲೂ ಕ್ಯೂಆರ್ ಕೋಡ್ ಸಂಬಂಧಿತ ಸೈಬರ್ ಕ್ರೈಮ್ ಪ್ರಕರಣಗಳೇ  ಪೊಲೀಸರಿಗೆ ಹೆಚ್ಚು  ತಲೆನೋವು ತರಿಸುತ್ತಿದೆ.

ಇದನ್ನು ಓದಿ: ಅಕ್ರಮ ಆಸ್ತಿ ಪತ್ತೆ ಪ್ರಕರಣ: ಕೆ.ಟಿ ಶ್ರೀನಿವಾಸ್​ ಬಂಧನ!

ಪೊಲೀಸ್​ ಇಲಾಖೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ 2017 ರಿಂದ ಇಲ್ಲಿಯವರೆಗೆ 50,000 ಸೈಬರ್ ಅಪರಾಧ  ಪ್ರಕರಣಗಳು ದಾಖಲಾಗಿವೆ. ಈ ಪೈಕಿ 20,662 ಪ್ರಕರಣಗಳು ಕ್ಯೂ ಆರ್ ಕೋಡ್ ಸ್ಕ್ಯಾಮ್​ಗಳದ್ದಾಗಿದೆ.

ಡೆಬಿಟ್ ಕಾರ್ಡ್ ದುರುಪಯೋಗ, ವಂಚಕ ಲಿಂಕ್ (FraudLink) ಇತ್ಯಾದಿ ಅಡ್ಡದಾರಿಗಳ ಮೂಲಕ ಹಣ ಲಪಟಾಯಿಸುವ ಪ್ರಕರಣಗಳೇ ಆಗಿವೆ. ಒಟ್ಟಾರೆ ಸೈಬರ್​ ಕ್ರೈಮ್​ ಪ್ರಕರಣಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಕ್ಯೂಆರ್​ ಕೋಡ್​ ವಂಚನೆ ಪ್ರಕರಣಗಳೇ ಆಗಿದೆ.

RELATED ARTICLES

Related Articles

TRENDING ARTICLES