Monday, December 23, 2024

ಟೈಂ ಸ್ಕ್ವೇರ್ ನಲ್ಲಿ ಕನ್ನಡಿಗ ಡಾಲಿ ಧನಂಜಯ ಮಿಂಚು

ಬೆಂಗಳೂರು : ಯುಎಸ್​ನ ನ್ಯೂಯರ್ಕ್​ ಸಿಟಿಯಲ್ಲಿ ಡಾಲಿ ಧನಂಜಯ ಅವರ ಹುಟ್ಟುಹಬ್ಬಕ್ಕೆ ಶುಭಕೋರಿ ಗೌರವಿಸಿದ ಕರ್ನಾಟಕದ ಪಿಂಕ್ ಟಿಕೆಟ್ಸ್ ಪಿಆರ್​ಓ ತಂಡ.

ಇಂದು 38 ನೇ ವಸಂತಕ್ಕೆ ಕಾಲಿಟ್ಟಿರೋ ನಟ ಡಾಲಿ ಧನಂಜಯ. ಈ ಹಿಂದೆ ಟೈಂ ಸ್ಕ್ವೇರ್​ನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ಗೌರವ ಸಿಕ್ಕಿತ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಭಾರಿಗೆ ನ್ಯೂಯಾರ್ಕ್ ಟೈಂ ಸ್ಕ್ವೇರ್​ನಲ್ಲಿ ಕಂಡ ಕನ್ನಡಿಗ ಡಾಲಿ. ಈ ಭಾರಿ ಭಾರತದ ನಟ ಡಾಲಿಗೆ ಟೈಂ ಸ್ಕ್ವೇರ್​ನಲ್ಲಿ ಗೌರವ ದೊರಕಿದೆ.

ಡಾಲಿ ಧನಂಜಯ ಅವರ ಹುಟ್ಟುಹಬ್ಬದ ಹಿನ್ನೆಲೆ ಯುಎಸ್‍​ನ ನ್ಯೂಯಾರ್ಕ್​ ಸಿಟಿಯ ಪ್ರತಿಷ್ಠಿತ ಕಟ್ಟಡದಲ್ಲಿ ಡಾಲಿಗೆ ಹುಟ್ಟುಹಬ್ಬದ ಶುಭಾಶವನ್ನು ಹೇಳಿ ಗೌರವಿಸಿದರು. ಮೊದಲ ಕನ್ನಡ ನಟನ ಹುಟ್ಟುಹಬ್ಬದ ವಿಡಿಯೋ ಸುಮಾರು 15 ಸೆಕೆಂಡ್​ನ ವಿಡಿಯೋವನ್ನು ಪ್ರಸಾರ ಮಾಡಿದ್ದ ಟೈಂ ಸ್ಕ್ವೇರ್. ಕರ್ನಾಟಕದ ಪಿಂಕ್ ಟಿಕೆಟ್ಸ್ ಪಿಆರ್‍ಓ ತಂಡದವರು ಶುಭಾಶ ಹೇಳಿ ವಿಶೇಷ ಉಡುಗೊರೆ ನೀಡಿದರು. ಇದು ನಾವೆಲ್ಲರೂ ಹೆಮ್ಮೆ ಪಡುವಂತಹ ವಿಚಾರ.

ಇದನ್ನು ಓದಿ : ಕೇಕ್, ಹಾರ ತರಬೇಡಿ.. ಫ್ಯಾನ್ಸ್​ಗೆ ಡಾಲಿ ಧನಂಜಯ ಮನವಿ

ಅಷ್ಟೇ ಅಲ್ಲದೆ ನಿನ್ನೆ ಡಾಲಿ ನಟನೆಯ ಉತ್ತರಕಾಂಡ ಚಿತ್ರದ ಟೀಸರ್ ಲಾಂಚ್ ಆಗಿತ್ತು. ಅದೇ ಖುಷಿಯಲ್ಲಿ ಇಂದು ಅವರ ಹುಟ್ಟುಹಬ್ಬದ ಸಂಭ್ರಮ ಕೂಡ ಇರುವ ಹಿನ್ನೆಲೆ ನಿನ್ನೆ ಮಧ್ಯರಾತ್ರಿಯವರೆಗೂ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ಕಾದು ಕುಳಿತಿದ್ದ ಅಭಿಮಾನಿಗಳು. ಬಳಿಕ 12 ಗಂಟೆಗೆ ಸರಿಯಾಗಿ ಸಾವಿರಾರು ಅಭಿಮಾನಿಗಳ ಜೊತೆಗೆ ಬರ್ತ್​ ಡೇ ಸೆಲೆಬ್ರೇಟ್ ಮಾಡಿಕೊಂಡ ನಟರಾಕ್ಷಸ ಡಾಲಿ ಧನಂಜಯ.

RELATED ARTICLES

Related Articles

TRENDING ARTICLES