Monday, December 23, 2024

ಕಾವೇರಿ ಸರ್ವಪಕ್ಷ ಸಭೆಯಲ್ಲಿ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತೇನೆ: ಕುಮಾರಸ್ವಾಮಿ

ಬೆಂಗಳೂರು : ಕಾವೇರಿ ವಿಚಾರದ ಬಗ್ಗೆ ಚರ್ಚೆ ನಡೆಸಲು ಕರೆಯಲಾಗುವ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗುತ್ತೆನೆ. ಅಲ್ಲಿ ನಮ್ಮ ಪಕ್ಷದ ನಿಲುವನ್ನು ಸ್ಪಷ್ಟವಾಗಿ ಹೇಳಲಾಗುವುದು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ನರದಲ್ಲಿ ಮಾತನಾಡಿದ ಅವರು, ಸರ್ವಪಕ್ಷ ಸಭೆಗೆ ಹೋಗಬೇಕಾದದ್ದು ನನ್ನ ಕರ್ತವ್ಯ. ತಮಿಳುನಾಡಿಗೆ ನೀರು ಬಿಟ್ಟ ಕೂಡಲೇ ಮೊದಲು ದನಿ ಎತ್ತಿದವನೇ ನಾನು. ಸರ್ವಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯ ಮಾಡಿದವನು ಕೂಡ ನಾನೇ ಎಂದು ಅವರು ಹೇಳಿದರು.

ಇದನ್ನೂ ಓದಿ: ದೇವೇಗೌಡರ ಕುಟುಂಬವನ್ನು ಖರೀದಿಸುವ ಶಕ್ತಿ ಡಿಕೆಶಿ ಗೆ ಇಲ್ಲ: ಹೆಚ್​ಡಿಕೆ

ಆದರೆ, ರಾಜ್ಯದ ಹಿತ ಪರಿಗಣನೆಗೆ ಕ್ರಮ ಕೈಗೊಳ್ಳಬೇಕಾದ ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಅವರು, ಯಾವುದೋ ಹಳೆಯ ಟ್ವಿಟ್ ಪ್ರಸ್ತಾಪ ಮಾಡಿದ್ದಾರೆ. ಆ ಟ್ವೀಟ್ ನಲ್ಲಿ ಏನು ಹೇಳಿದ್ದೇನೆ? ಎರಡೂ ರಾಜ್ಯಗಳ ಜನರು ಅಣ್ಣತಮ್ಮಂದಿರ ರೀತಿ ಇರಬೇಕೆಂದು ಹೇಳಿದ್ದೇನೆ. ಕಾನೂನು ವ್ಯಾಪ್ತಿಯಲ್ಲಿ ನೂರಾರು ವರ್ಷ ಹೋರಾಟ ಮಾಡಿ ಆಗಿದೆ.

ಈಗ ಕೊಟ್ಟು ತೆಗೆದುಕೊಳ್ಳುವ ಮನಸ್ಸು ಇರಬೇಕು. ತಮಿಳುನಾಡಿನ ರೈತರಿಗೆ ನಾವು ಎಂದೂ ದ್ರೋಹ ಮಾಡಿಲ್ಲ, ನಮ್ಮ ರಾಜ್ಯದ ರೈತರಿಗೆ ಅನ್ಯಾಯ ಮಾಡಬೇಡಿ ಅಂತ ಹೇಳಿದ್ದೇನಿ. ಸ್ಟಾಲೀನ್ ಅವರಿಗೆ ಈ ಮಾತು ಹೇಳಿದ್ದೀನಿ. ಇದರಲ್ಲಿ ಹುಳುಕು ಹುಡುಕುವಂತಹ ಅಂಶ ಏನಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು ಕುಮಾರಸ್ವಾಮಿ ಅವರು.

ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಬೇಡಿ. ನಾನು ನನ್ನ ಟೈಮ್​ ನಲ್ಲಿ ಎಲ್ಲಾದರೂ ನೀರು ಬಿಡ್ತೀನಿ ಅಥವಾ ಬಿಡಿ ಎಂದು ಹೇಳಿದ್ದೀನಾ? ಉನ್ನತ ಸ್ಥಾನದಲ್ಲಿ ಇದ್ದೀರಾ, ಹೀಗೆ ಸುಳ್ಳು ಹೇಳುವುದಾ? ಪೆನ್ ಪೆನ್ ಕೊಡಿ ಎಂದು ನಾನು ಜನರನ್ನು ಕೆಳಿದೆನಾ? ನಮ್ಮ ರಾಜ್ಯವನ್ನು ಹಾಳು ಮಾಡಲು ಪೆನ್ ಕೇಳಿದಿರಾ ನೀವು? ಹುಡುಗಾಟ ಆಡಬೇಡಿ, ಆ ಸ್ಥಾನದ ಗಾಂಭೀರ್ಯತೆ ಕಾಪಾಡಿಕೊಳ್ಳಿ. ಆ ಸ್ಥಾನದ ಗೌರವವನ್ನು ಉಳಿಸಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೆಸರೇಳದೇ ಟೀಕಾಪ್ರಹಾರ ನಡೆಸಿದರು.

RELATED ARTICLES

Related Articles

TRENDING ARTICLES