Sunday, January 19, 2025

ಚಂದ್ರಯಾನ-3 : ಮತ್ತೊಂದು ಫೋಟೋ ರಿಲೀಸ್

ಬೆಂಗಳೂರು : ಚಂದ್ರಯಾನ-3 ಮಿಷನ್​ನ ಮತ್ತೊಂದು ಫೋಟೋವನ್ನು ಇಸ್ರೋ ಬಿಡುಗಡೆ ಮಾಡಿದೆ. ಚಂದ್ರಯಾನ-3 ಸುರಕ್ಷಿತ ಲ್ಯಾಂಡಿಂಗ್ ಬಳಿಕ ಈ ಫೋಟೋವನ್ನು ಸೆರೆಹಿಡಿಯಲಾಗಿದೆ.

ಈ ಫೋಟೋ ಚಂದ್ರಯಾನ-3 ಲ್ಯಾಂಡಿಂಗ್​​ ಸೈಟ್​ನ ಒಂದು ಭಾಗವನ್ನು ತೋರಿಸುತ್ತದೆ. ಒಂದು ಕಾಲು ಮತ್ತು ಲ್ಯಾಂಡರ್​ನ ಜೊತೆಗಿರುವ ನೆರಳು ಕೂಡ ಕಾಣಿಸುತ್ತದೆ.

ಇನ್ನೂ, ಚಂದ್ರಯಾನ-3 ಚಂದ್ರನ ಮೇಲ್ಮೈನಲ್ಲಿ ಸಮತಟ್ಟಾದ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದೆ. ಬೆಂಗಳೂರಿನಲ್ಲಿರುವ ತನ್ನ ಕೇಂದ್ರ ಮತ್ತು ಚಂದ್ರಯಾನ-3 ಲ್ಯಾಂಡರ್​ ನಡುವೆ ಸಂವಹನ ಆರಂಭವಾಗಿದೆ ಎಂದು ಇಸ್ರೋ ಹೇಳಿದೆ.

ಇನ್ಮುಂದೆ ಲ್ಯಾಂಡರ್, ರೋವರ್ ಕಾರ್ಯ

ಚಂದ್ರಯಾನ-3ರ ಯಶಸ್ಸಿನೊಂದಿಗೆ ಈಗ ವಿಕ್ರಮ್ ಲ್ಯಾಂಡರ್‌ನಿಂದ ರೋವರ್ ಹೊರಬರಲಿದೆ. ಸೈಡ್ ಪ್ಯಾನಲ್ ಗಳನ್ನು ರಾಂಪ್ ಆಗಿ ಬಳಸಿ, ಚಂದ್ರನ ಮೇಲ್ಮೀಯನ್ನು ಸ್ಪರ್ಶಿಸಲಿವೆ. ಲ್ಯಾಂಡರ್ ಮತ್ತು ರೋವರ್‌ಗಳಲ್ಲಿನ ಪೇಲೋಡ್‌ಗಳು 14 ದಿನಗಳವರೆಗೆ ಆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮ್ಮ ಕಾರ್ಯಗಳನ್ನು ಮುಂದುವರಿಸುತ್ತವೆ. ಇದು ಲ್ಯಾಂಡರ್ ಮಾಡಿದ ಅವಲೋಕನಗಳನ್ನು ನೇರವಾಗಿ ನೆಲದ ಮೇಲಿನ ನಿಗಾ ಕೇಂದ್ರಕ್ಕೆ ತಿಳಿಸುತ್ತದೆ.

ಸಿದ್ದರಾಮಯ್ಯ ಅಭಿನಂದನೆ

ಚಂದ್ರಯಾನ-3 ಯಶಸ್ಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ದೇಶದ ವಿಜ್ಞಾನಿಗಳ ನಿರಂತರ ಪ್ರಯತ್ನ ಮತ್ತು ದಶಕಗಳ ಪರಿಶ್ರಮ ಇಂದು ಫಲ ನೀಡಿದೆ. ಚಂದ್ರನ ದಕ್ಷಿಣ ದ್ರುವದಲ್ಲಿ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವ ಮೂಲಕ ಇಸ್ರೋ ಸ್ಥೆಯ ಸಾಧನೆಯನ್ನು ಜಗತ್ತು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES