Sunday, January 19, 2025

ಚಂದ್ರಯಾನ ಸಕ್ಸಸ್ : ನಟ ದರ್ಶನ್-ಯಶ್ ಟ್ವೀಟ್

ಬೆಂಗಳೂರು : ಚಂದ್ರಯಾನ-3 ಯಶಸ್ವಿಗೆ ದೇಶಾದಂತ್ಯ ಸಂಭ್ರಮಾಚರಣೆ ನಡೆಯುತ್ತಿದೆ. ಇಸ್ರೋ ಸಾಧನೆಗೆ ರಾಜಕೀಯ ನಾಯಕರು, ಸಿನಿಮಾ ನಟರು ಸೇರಿದಂತೆ ಗಣ್ಯರಿಂದ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ.

ಸ್ಯಾಂಡಲ್​ವುಡ್ ‘ಡಿ’ ಬಾಸ್ ನಟ ದರ್ಶನ್ ತೂಗುದೀಪ, ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರು ಟ್ವೀಟ್ ಮೂಲಕ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದಾರೆ.

ಕನ್ನಡದಲ್ಲೇ ಟ್ವೀಟ್ ಮಾಡಿರುವ ನಟ ದರ್ಶನ್, ‘ಚಂದ್ರಯಾನ-3 ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರಗತಿಗೆ ಹಿಡಿದ ಕನ್ನಡಿ. ಈ ಹೆಮ್ಮೆಯ ಗುರಿ ಸಾಧಿಸಿದ ವಿಜ್ಞಾನಿಗಳ ಪ್ರಯತ್ನಕ್ಕೆ ಅಭಿನಂದನೆಗಳು. ಜೈ ಹಿಂದ್..’ ಎಂದು ಪೋಸ್ಟ್​ ಮಾಡಿದ್ದಾರೆ.

ಅಸಾಧ್ಯವಾದುದು ಏನು ಇಲ್ಲ

ನಟ ರಾಕಿಂಗ್ ಸ್ಟಾರ್ ಯಶ್ ಕೂಡ ಚಂದ್ರಯಾನ-3 ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಯತ್ನಿಸುವವರಿಗೆ ಅಸಾಧ್ಯವಾದುದು ಏನು ಇಲ್ಲ. ಇಸ್ರೋಗೆ ಅಭಿನಂದನೆಗಳು. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಮೇಲೆ ಮೊದಲ ಬಾರಿಗೆ ಯಶಸ್ವಿ ಲ್ಯಾಂಡಿಂಗ್ ಆಗದೆ. ನೀವು ಇತಿಹಾಸ ನಿರ್ಮಿಸಿದ್ದೀರಿ, ಭಾರತವನ್ನು ಮುಂಚೂಣಿಯಲ್ಲಿ ಇರಿಸಿದ್ದೀರಿ. ಎಲ್ಲಾ ಭಾರತೀಯರು ಹೆಮ್ಮೆಪಡುವಂತೆ ಮಾಡಿದ್ದೀರಿ ಎಂದು ಪೋಸ್ಟ್​ ಮಾಡಿದ್ದಾರೆ.

ಇಸ್ರೋಗೆ ಸುಮಲತಾ ಅಭಿನಂದನೆ

ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರು ಟ್ವೀಟ್ ಮಾಡಿದ್ದು, ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಅತ್ಯಂತ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿದಿದ್ದು ಅತ್ಯಂತ ಹೆಮ್ಮೆ ತಂದಿದೆ. ಕೋಟ್ಯಂತರ ಭಾರತೀಯರ ಪ್ರಾರ್ಥನೆ ಕೊನೆಗೂ ಫಲಿಸಿದೆ. ಆ ಕ್ಷಣವೂ ನಿಜಕ್ಕೂ ರೋಮಾಂಚಕವಾಗಿತ್ತು. ಜಗತ್ತೇ ಸಂಭ್ರಮಿಸುವಂತಹ ಇಂತಹ ಸಾಧನೆ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಿಗೆ ಹಾಗೂ ಇದಕ್ಕಾಗಿ ಶ್ರಮಿಸಿದ ಸರ್ವರಿಗೂ ಅಭಿನಂದನೆಗಳು ಎಂದು ಪೋಸ್ಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES