Sunday, January 19, 2025

ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಬೆಂಗಳೂರಿನ ಹಲವೆಡೆ ನಿಗದಿತ ಸಮಯದಲ್ಲಿ ವಿದ್ಯುತ್ ಕಡಿತವಾಗಲಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಹಲವಾರು ನಿರ್ವಹಣಾ ಕಾರ್ಯಗಳಲ್ಲಿ ತೊಡಗಿರುವ ಕಾರಣ ಇಂದು ವಿದ್ಯುತ್ ವ್ಯತ್ಯಯವಾಗಲಿದೆ.

ತ್ರೈಮಾಸಿಕ ನಿರ್ವಹಣೆ, ಕೇಬಲ್ ಹಾನಿ ಸರಿಪಡಿಸುವುದು, ಜಲಸಿರಿ 24X7 ನೀರು ಸರಬರಾಜು ಕೆಲಸ, ಕಂಬಗಳನ್ನು ನೇರಗೊಳಿಸುವುದು ಸೇರಿ ಹಲವು ಕಾಮಗಾರಿಗಳನ್ನು ಬೆಸ್ಕಾಂ ಮತ್ತು KPTCL ಹಮ್ಮಿಕೊಂಡಿದೆ. ಹೀಗಾಗಿ, ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಆರ್ಟಿಕಲ್ಚರ್ ಆಫೀಸ್ ರಸ್ತೆ, ಗಾಯತ್ರಿ ವೃತ್ತ, SBM ಮುಖ್ಯ ವೃತ್ತ, ಧರ್ಮಶಾಲಾ ರಸ್ತೆ, ಗಾಂಧಿ ವೃತ್ತ, ತಿಪ್ಪಾಜಿ ವೃತ್ತ, ಕೆಳಗೋಟೆ ಪ್ರದೇಶಗಳು, ಬ್ಯಾಂಕ್ ಕಾಲೋನಿ, ಚಳ್ಳಕೆರೆ ರಸ್ತೆ, ಮದಕರಿಪುರ, JCR ಮುಖ್ಯರಸ್ತೆ ಸೇರಿದಂತೆ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತವಾಗಲಿದೆ.

RELATED ARTICLES

Related Articles

TRENDING ARTICLES