Monday, December 23, 2024

ರೈತರಿಗೆ ಕಾಟ ಕೊಡುತ್ತಿದ್ದ ಚಿರತೆ ಸೆರೆ

ತುಮಕೂರು : ರೈತರಿಗೆ ಕಾಟ ಕೊಡುತ್ತಿದ್ದ ಚಿರತೆಯನ್ನು ಬೋನ್​ಗೆ ಹಾಕಿದ ಅರಣ್ಯ ಇಲಾಖೆ ಘಟನೆ ತಾಲೂಕಿನ ಚಿನಿವಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಲವು ದಿನಗಳಿಂದ ಗ್ರಾಮದ ಜನರಿಗೆ ತೊಂದರೆ ಕೊಡುತ್ತಿದ್ದ ಚಿರತೆ. ರೈತರು ಹೊಲಗಳಿಗೆ ಹೋದಾಗ ಕಾಣಿಸಿಕೊಳ್ಳುತ್ತಿದ್ದ ಚಿರತೆ. ಈ ಹಿನ್ನೆಲೆ ನಿನ್ನೆ ಚಿರತೆಯ ಚಲನವಲನವನ್ನು ಗಮನಿಸಿ ಬೋನ್ ಚಿರತೆ ಹೆಚ್ಚಾಗಿ ಓಡಾಡುವ ಜಾಗದಲ್ಲಿ ಇರಿಸಲಾಗಿತ್ತು.

ಇದನ್ನು ಓದಿ : ಅಕ್ರಮ ಕಲ್ಲುಗಣಿಗಾರಿಕೆ ; ಭೂ ವಿಜ್ಞಾನ ಅಧಿಕಾರಿಗಳ ದಾಳಿ

ಬಳಿಕ ನಿನ್ನೆ ಮಧ್ಯರಾತ್ರಿ ಬೋನಿಗೆ ಬಿದ್ದ ಚಿರತೆ. ಚಿರತೆ ಬೋನಿಗೆ ಬಿದ್ದ ವಿಚಾರ ಕೇಳಿ ಗ್ರಾಮದ ರೈತರು ಭಯದಿಂದ ನಿರಾಳರಾದರು.

ಚಿರತೆ ಸೆರೆ ಹಿಡಿಯುವುದರಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಸದ್ಯ ಬಂಡೀಪುರದ ಅಭಯಾರಣ್ಯಕ್ಕೆ ಚಿರತೆಯನ್ನು ರವಾನೆ ಮಾಡಲು ಸಿದ್ಧತೆ ಮಾಡುತ್ತಿರುವ ಅರಣ್ಯ ಇಲಾಖೆ.

RELATED ARTICLES

Related Articles

TRENDING ARTICLES