Friday, November 22, 2024

SEP ‘ಸೋನಿಯಾ ಶಿಕ್ಷಣ ನೀತಿ’ ಜಾರಿಗೆ ತರ್ತಿದ್ದೀರಾ : ಬಿ.ಸಿ ನಾಗೇಶ್

ತುಮಕೂರು : ಕಾಂಗ್ರೆಸ್​ ಸರ್ಕಾರ ಎನ್​ಇಪಿಯನ್ನು ರದ್ದುಗೊಳಿಸಿರುವುದಕ್ಕೆ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಎನ್‌ಇಪಿಯನ್ನು NEP-2020 ಅನ್ನು ‘ನಾಗಪುರ ಶಿಕ್ಷಣ ನೀತಿ’ ಎನ್ನುವ ಡಿಸಿಎಂ ಡಿಕೆಶಿ ಅವರೇ, ರಾಜ್ಯದಲ್ಲಿ SEP ‘ಸೋನಿಯಾ ಶಿಕ್ಷಣ ನೀತಿ’ಯನ್ನು ಜಾರಿಗೆ ತರುತ್ತಿದ್ದೀರಾ? ಎಂದು ಕುಟುಕಿದ್ದಾರೆ.

ಬಡವ, ಶ್ರೀಮಂತ ಎನ್ನದೇ ಸರ್ವರಿಗೂ ಕೌಶಲ್ಯ ಆಧಾರಿತ, ‘ಸಮಾನ ಗುಣಮಟ್ಟ’ದ ಶಿಕ್ಷಣ ನೀಡುವ ಅಂಶಗಳನ್ನು NEP-2020 ಒಳಗೊಂಡಿದೆ. ಬಡವರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಬಾರದೇ? ಸಮಾನ ಶಿಕ್ಷಣ ನೀಡಿದರೆ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಬಾಗಿಲು ಹಾಕಬೇಕಾಗಬಹುದು ಎಂಬ ಆತಂಕವೇ? ಎಂದು ಪ್ರಶ್ನಿಸಿದ್ದಾರೆ.

ಸಿಬಿಎಸ್ಇ ಶಾಲೆಗಳಲ್ಲಿ ಈಗಾಗಲೇ NEP-2020 ಅನುಷ್ಠಾನವಾಗಿದೆ. ಹೀಗಾಗಿ, ಕಾಂಗ್ರೆಸ್ ನಾಯಕರು ಹಾಗೂ ಇನ್ನಿತರ ಬಲಾಡ್ಯ ರಾಜಕಾರಣಿಗಳ ಒಡೆತನದಲ್ಲಿರುವ CBSE ಶಿಕ್ಷಣ ಸಂಸ್ಥೆಗಳಲ್ಲಿನ NEP-2020 ಆಧಾರಿತ CBSE ಪಠ್ಯಕ್ರಮದ ಬದಲು ಉದ್ದೇಶಿತ ರಾಜ್ಯ ಶಿಕ್ಷಣ ನೀತಿ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಾಗುವುದೇ? ಎಂದು ಗುಡುಗಿದ್ದಾರೆ.

 

ಲೋಪ ದೋಷಗಳು ಏನು?

ವಿಜ್ಞಾನಿಗಳು, ಶಿಕ್ಷಣ ತಜ್ಞರು, ಮಕ್ಕಳ ತಜ್ಞರು, ಶಿಕ್ಷಕ ಸಮುದಾಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚಿಸಿ 10 ವರ್ಷ ಕಾಲ ಅಧ್ಯಯನ ನಡೆಸಿ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ರದ್ದುಗೊಳಿಸಲು ಕಾರಣವೇನು? ಅದರಲ್ಲಿರುವ ಲೋಪ ದೋಷಗಳು ಏನು? ಎಂಬುದನ್ನು ದಾಖಲೆ ಮೂಲಕ ರಾಜ್ಯದ ಜನರಿಗೆ ತಿಳಿಸುವಿರಾ? ಛೇಡಿಸಿದ್ದಾರೆ.

RELATED ARTICLES

Related Articles

TRENDING ARTICLES