Wednesday, January 22, 2025

ಆದಾಯ ಮೀರಿ ಆಸ್ತಿ ಗಳಿಕೆ : ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ!

ಬೆಂಗಳೂರು : ಅದಾಯ ಮೀರಿದ ಆಸ್ತಿ ಗಳಿಕೆ ಹಿನ್ನೆಲೆ ಸರ್ವೆ ಸೂಪರ್ ವೈಸರ್ ಕೆ.ಟಿ ಶ್ರೀನಿವಾಸ್ ಮನೆ ಮತ್ತು ಕಚೇರಿಮೇಲೆ  ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದ್ದಾರೆ.

ಕೆಆರ್ ಪುರಂ ತಾಲೂಕು ಕಛೇರಿ ಯಲ್ಲಿ ಸರ್ವೆ ಸೂಪರ್ ವೈಸರ್ ಆಗಿರುವ ಕೆ.ಟಿ ಶ್ರೀ ನಿವಾಸ್ ಮೂರ್ತಿ ಗೆ ಸೇರಿದ ಬೆಂಗಳೂರು, ತುಮಕೂರು ಸೇರಿದಂತೆ 14 ಸ್ಥಳಗಳಲ್ಲಿ ಏಕಕಾಲಕ್ಕೆ 5 ಕ್ಕೂ ಹೆಚ್ಚು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: 10 ಲಕ್ಷ ಮೌಲ್ಯದ ಪೆಟ್ರೋಲ್​ ಮತ್ತು ಡೀಸೆಲ್​ ರಸ್ತೆಗೆ ಬಿಟ್ಟ ದುಷ್ಕರ್ಮಿಗಳು!

ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಹೊಂದಿರುವ ಕುರಿತು ಹಲವು ದೂರುಗಳು ಬಂದ ಹಿನ್ನೆಲೆ ಸರ್ವೆ ಸೂಪರ್ವೈಸರ್​ ಕೆ.ಟಿ ಶ್ರೀನಿವಾಸ್​ ಅವರಿಗೆ ಸೇರಿದ ಅಂಧ್ರಳ್ಳಿ ನಿವಾಸ, ಸಹೋದರಿಯ ಹೆಣ್ಣೂರು ನಿವಾಸ ಪತ್ನಿ ಹೆಸರಿನಲ್ಲಿ ಹೋಟೆಲ್ಸ್ ಬೋರ್ಡಿಂಗ್ ಹೌಸ್ , ಸಹೋದರನ ತುಮಕೂರಿನ ನಿವಾಸದ ಮೇಲು ದಾಳಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES