Monday, December 23, 2024

ತುಮಕೂರಲ್ಲಿ ಇಂದಿರಾ ಕ್ಯಾಂಟಿನ್ ಗೆ ಹಿಡಿದ ಗ್ರಹಣ

ತುಮಕೂರು : ಸಿಬ್ಬಂದಿಗಳಿಗೆ ಸಂಬಳ ನೀಡದ ಹಿನ್ನೆಲೆ ನಾಲ್ಕು ಇಂದಿರಾ ಕ್ಯಾಂಟೀನ್​ಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿರುವ ಸಿಬ್ಬಂದಿಗಳು.

ಕಳೆದ 8 ತಿಂಗಳಿಂದ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳಿಗೆ ಸಂಬಳ ನೀಡದ ರಿವಾರ್ಡ್ಸ್ ಏಜೆನ್ಸಿಗಳು. ಈ ಹಿನ್ನೆಲೆ ಇಂದು ಕ್ಯಾಂಟೀನ್​ಗಳಲ್ಲಿ ಉಪ್ಪಿಟ್ಟು, ಇಡ್ಲಿ, ಚಟ್ನಿ ತಯಾರಿ ಮಾಡಿಟ್ಟಿದ್ದರು, ತಿಂಡಿ ತಿನ್ನಲು ಬಂದ ಗ್ರಾಹಕರಿಗೆ ನೀಡದೆ ವಾಪಸ್ ಕಳುಹಿಸಿದ ಕ್ಯಾಂಟೀನ್ ಸಿಬ್ಬಂದಿಗಳು.

ಇದನ್ನು ಓದಿ : ವರಮಹಾಲಕ್ಷೀಗೂ ಮುನ್ನವೇ ಜನರಿಗೆ ಬೆಲೆ ಏರಿಕೆ ಶಾಕ್

ಬಳಿಕ ಸಂಬಳ ಇಲ್ಲದೆ ಮನೆಯನ್ನು ನಡೆಸಲು ತೊಂದರೆ ಅನುಭವಿಸುತ್ತಿರುವ ಸಿಬ್ಬಂದಿಗಳು. ಇದರಿಂದ ಸಿಬ್ಬಂದಿಗಳು ಆಕ್ರೋಶಕ್ಕೆ ಒಳಗಾಗಿದ್ದು, ಇಂದು ಮಹಾನಗರ ಪಾಲಿಕೆ, ಕ್ಯಾತಸಂದ್ರ, ಮಂಡಿಪೇಟೆ ಮತ್ತು ಶಿರಾ ಗೇಟ್​ನ ಕ್ಯಾಂಟೀನ್​ಗಳನ್ನು ಕ್ಲೋಸ್ ಮಾಡಿ ಪ್ರತಿಭಟನೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಸಂಬಳ ಕೊಡುವವರೆಗೂ ಕ್ಯಾಂಟೀನ್​ಗಳನ್ನು ತೆಗೆಯುವುದಿಲ್ಲ ಎಂದು ಸುಮಾರು 30 ಸಿಬ್ಬಂದಿಗಳು ಸೇರಿ ಏಜೆನ್ಸಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES