Thursday, December 19, 2024

ಡಿವೈಡರ್​ಗೆ ಬೈಕ್ ಡಿಕ್ಕಿ ; ಇಬ್ಬರಿಗೆ ಗಂಭೀರ ಗಾಯ

ಕಾರವಾರ : ಚಲಿಸುತ್ತಿದ್ದ ವೇಳೆ ಬೈಕ್ ಚಾಲಕ ಡಿವೈಡರ್​ಗೆ ಡಿಕ್ಕಿ ಹೊಡದು ಇಬ್ಬರು ಯುವಕರಿಗೆ ಗಂಭೀರಗಾಯ ಘಟನೆ ಅಂಕೋಲಾ ಪಟ್ಟಣದ ಕಾರವಾರ ರಸ್ತೆಯಲ್ಲಿ ನಡೆದಿದೆ.

ಹೊಸಕಂಬಿಯ ವಿಶ್ವನಾಥ ಆಗೇರ ಹಾಗೂ ಆತನ ಸ್ನೇಹಿತ ಗಾಯಗೊಂಡ ಸವಾರರು. ಬೈಕ್​ನಲ್ಲಿ ಬರುವ ವೇಳೆ ಡಿವೈಡರ್​ಗೆ ಭೀಕರವಾಗಿ ಡಿಕ್ಕಿ ಹೊಡೆದ ಹಿನ್ನೆಲೆ ಇಬ್ಬರಿಗೂ ಗಂಭೀರ ಗಾಯಗೊಂಡಿದ್ದಾರೆ.

ಇದನ್ನು ಓದಿ : ರಾಜವಂಶಸ್ಥ, ಮಾಜಿ ಸಚಿವ ಶ್ರೀರಂಗದೇವರಾಯಲು ಇನ್ನಿಲ್ಲ

ಗಾಯಾಳುಗಳನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನಿಸಲಾಯಿತು. ಇಬ್ಬರಿಗೂ ಹೆಚ್ಚಾಗಿ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾರಗವಾರ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಅತಿ ವೇಗವಾಗಿ ಬೈಕ್ ಚಲಾವಣೆಯಿಂದ ಈ ಅಪಘಾತವಾಗಿದೆ ಎಂಬ ಶಂಕೆಯಿದೆ.

ಈ ಘಟನಾ ಹಿನ್ನೆಲೆ ಅಂಕೋಲಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES