Thursday, December 19, 2024

ಈಶ್ವರಪ್ಪ ಮಗನನ್ನು ಬಿಟ್ಟು ವಾತಾವರಣ ಕೆಡಿಸ್ತಿದಾರೆ : ಬಿ.ಸಿ. ಪಾಟೀಲ್ ಕಿಡಿ

ಹಾವೇರಿ : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪನವರು ಇಲ್ಲಿಯೂ ಮಗನನ್ನು ಬಿಟ್ಟು ವಾತಾವರಣ ಕೆಡಿಸ್ತಾ ಇದಾರೆ ಎಂದು ಸ್ವಪಕ್ಷ ನಾಯಕರ ವಿರುದ್ಧ ಮಾಜಿ ಸಚಿವ ಬಿ.ಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಹಾವೇರಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂತೇಶ್ ಈಶ್ವರಪ್ಪಗೆ ಲೋಕಸಭೆ ಟಿಕೆಟ್ ಕೊಡಸಬೇಕೆಂಬ ನಡೆಗೆ ಕಿಡಿಕಾರಿದ್ದಾರೆ.

ಚುನಾವಣೆಯಲ್ಲಿ ವಿರೋಧ ಮಾಡಿದವರನ್ನು ಕರೆದುಕೊಂಡು ಕ್ಷೇತ್ರದಲ್ಲಿ ಓಡಾಡ್ತಿದಾರೆ. ಈಶ್ವರಪ್ಪನವರು ವಲಸೆ ಬಂದು ನಮ್ಮ ಬಗ್ಗೆ ಈ ಹಿಂದೆ ಮಾತಾಡಿದ್ದಾರೆ. ಮತ್ತೆ ಕಾಲ್ ಮಾಡಿದಾಗ ನಾನು ಹೇಳಿಲ್ಲ, ಕ್ಷಮಿಸಿ ಅಂತಾರೆ. ಹಿರಿಯ ನಾಯಕರಾಗಿ ಈ ರೀತಿ ಮಕ್ಕಳಂತೆ ಮಾತಾಡಿದ್ರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ತಿಹಾರ್ ಜೈಲಿಗೆ ಹೋರಾಟ ಮಾಡಿ ಹೋಗಿದ್ರಾ? : HDK ಗುಡುಗು

ಮಗನಿಗಾಗಿ ಓಡಾಡೋದು ಯಾಕೆ?

ಸರ್ವೆ ಮಾಡ್ತಿದಾರೆ, ಯಾರು ಅಭ್ಯರ್ಥಿ ಅನ್ನೋದು ನೋಡಿ ಟಿಕೆಟ್ ಕೊಡ್ತಾರೆ. ಏನೂ ಇಲ್ಲದೇ ಸುಮ್ಮನೆ ಬಂದು ವಾತಾವರಣ ಕೆಡಿಸ್ತಿದಾರೆ.  ನಾನು ಕಟೀಲ್ ಅವರಿಗೂ ಟಿಕೆಟ್ ಭರವಸೆ ಬಗ್ಗೆ ಕೇಳಿದಾಗ, ಅವರು ಇಲ್ಲ ಎಂದಿದಾರೆ. ಹೀಗಿದ್ದರೂ ಕ್ಷೇತ್ರದಲ್ಲಿ ಮಗನಿಗಾಗಿ ಓಡಾಡೋದು ಯಾಕೆ? ಎಂದು ಗುಡುಗಿದ್ದಾರೆ.

ಪ್ರಮೋದಿ ಹೆಸರಲ್ಲಿ ಚುನಾವಣೆ

ಹಿರಿಯ ನಾಯಕರು ಒಡಕು ಇರುವ ಜಾಗದಲ್ಲಿ ನೀರು ಎರೆಯಬಾರದು. ಪಕ್ಷ ಹೇಳಿದಾಗ ಕ್ಷೇತ್ರಕ್ಕೆ ಹೋಗೋದು ಅರ್ಥ ಇದೆ. ಯಾರು ಹೇಳದೆ ಓಡಾಡಿದ್ರೆ ತಪ್ಪು ಅರ್ಥ ಆಗುತ್ತದೆ. ಪ್ರಧಾನಿ ಮೋದಿಯವರ ಹೆಸರಿನ ಮೇಲೆ ಲೋಕಸಭಾ ಚುನಾವಣೆ ನಡೆಯೋದು. ಇಲ್ಲಿ ಯಾರ ಮೇಲೂ ನಡೆಯಲ್ಲ ಎನ್ನುವ ಮೂಲಕ ಈಶ್ವರಪ್ಪಗೆ ಟಾಂಗ್ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES