ಬೆಂಗಳೂರು : ನಿಮಗೆ ಅಧಿಕಾರ ಕೊಟ್ಟಿದ್ದು ರಾಜ್ಯ ಮುನ್ನಡೆಸೋಕೆ, ಹಿನ್ನಡೆಸೋಕೆ ಅಲ್ಲ. ಐದು ವರ್ಷ ಸರ್ವಾಧಿಕಾರ ಮಾಡೋದಕ್ಕೆ ಅಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಿಕ್ಷಣ ನೀತಿ ಸಕಾರಣ ಇಲ್ಲದೇ ಬದಲಾವಣೆ ಮಾಡ್ತಿದ್ದೀರಿ. ಇದನ್ನು ನೋಡಿದ್ರೆ, ಸ್ವಾತಂತ್ರ್ಯಕ್ಕಾಗಿ 2ನೇ ಬಾರಿ ಹೋರಾಟ ಮಾಡುವ ಅಗತ್ಯ ಕಾಣುತ್ತಿದೆ. ಸಭೆಯಲ್ಲಿ ಚರ್ಚೆ ಮಾಡಿದ್ದೆ ಒಂದು, ತೀರ್ಮಾನ ಮಾಡಿದ್ದೇ ಒಂದು ಎಂದು ಕಿಡಿಕಾರಿದರು.
ಅನೇಕ ನಾಯಕತ್ವ ಬದಲಾಗಿದೆ. ಬಿಜೆಪಿ ವಿರೋಧ ಮಾಡಿ.. ನಮ್ಮನ್ನು ವಿರೋಧ ಮಾಡಿ. ಆದರೆ, ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ವೋಟು ಹಾಕಿದವರಿಗೆ ಮಾತ್ರ ಕೆಲಸ ಮಾಡೋದಲ್ಲ, ವೋಟು ಹಾಕದವರ ಪರವಾಗಿಯೂ ಕೆಲಸ ಮಾಡಬೇಕು. ಪ್ರಾಣಿ, ಸಸ್ಯ ಇದೆಲ್ಲದರ ಬಗ್ಗೆ ಕೆಲಸ ಮಾಡುವ ಜವಬ್ದಾರಿ ಇದೆ ಎಂದು ಕಾಂಗ್ರೆಸ್ಸಿಗರಿಗೆ ಬೊಮ್ಮಾಯಿ ನೀತಿ ಪಾಠ ಮಾಡಿದರು.
ಈ ಶಿಕ್ಷಣ ನೀತಿ ಏಕಾಏಕಿ ಬಂದಿಲ್ಲ. ಶಿಕ್ಷಣ ಕರ್ನಾಟಕ್ಕೆ ಮಾತ್ರ ಸೀಮಿತವಾಗಿ ನೋಡಿದ್ರೆ, ಜಗತ್ತು ಮುಂದಕ್ಕೆ ಹೋಗತ್ತೆ. ನಮ್ಮ ಮಕ್ಕಳು ಕೂಪ ಮಂಡೂಕಗಳಾಗಬೇಕಾ? ಎಂದು ಛೇಡಿಸಿದರು.