ಬೆಂಗಳೂರು : 300 ಹೊಸ ಮಾದರಿಯ ಬಸ್ಗಳನ್ನು ರಸ್ತೆಗಿಳಿಸಲು ಸಾರಿಗೆ ಇಲಾಖೆ ತಯಾರಿ ನಡೆಸಿದೆ.
ಶಕ್ತಿ ಯೋಜನೆ ಜಾರಿ ಹಿನ್ನೆಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗ್ತಿದೆ. ಇದರಿಂದ ಪುರುಷ ಪ್ರಯಾಣಿಕರು ಪರದಾಡುವಂತಾಗಿದೆ. ಜೊತೆಗೆ ಬಸ್ಗಳ ಕೊರತೆ ಸಹ ಕಾಣಿಸಿಕೊಂಡಿದೆ. ಈ ಕೊರತೆ ಕಡಿಮೆ ಮಾಡಲು ಸಾರಿಗೆ ಇಲಾಖೆ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.
ಸಾರ್ವಜನಿಕರ ಪ್ರಯಾಣಕ್ಕೆ ಉತ್ತಮ ಗುಣಮಟ್ಟದ ಪ್ರೊಟೊಟೈಪ್ ವಾಹನಗಳನ್ನು ರಸ್ತೆಗಿಳಿಸಲು ಸಾರಿಗೆ ಇಲಾಖೆ ಪ್ಲ್ಯಾನ್ ಮಾಡಿಕೊಂಡಿದೆ. ಅದರಲ್ಲೂ ವಿನೂತನ ಮಾದರಿಯ ಬಸ್ಗಳನ್ನು ಕೆಲವೇ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ.
ಈ ಕುರಿತು ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು, ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯಲ್ಲಿ ಈ ಎಲ್ಲ ಬದಲಾವಣೆಗಳನ್ನು ತರಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಂದೂವರೆ ತಿಂಗಳ ಅವಧಿಯಲ್ಲಿ 300 ಹೊಸ ಮಾದರಿಯ ವಿನೂತನ ಬಸ್ಗಳು ರಸ್ತೆಗೆ ಇಳಿಯಲಿವೆ ಎಂದಿದ್ದಾರೆ.
ಪ್ರೊಟೊಟೈಪ್ ಬಸ್ನ ವಿಶೇಷತೆಗಳು
- ವಾಹನದ ಎತ್ತರ 3,420 ಮಿ.ಮೀ
- 52 ಆಸನಗಳ ವ್ಯವಸ್ಥೆ
- ಬಕೆಟ್ ಟೈಪ್ ಸೀಟುಗಳು
- ವಿಶಾಲವಾದ ಕಿಟಕಿ ಗಾಜುಗಳು
- ಲಗೇಜ್ ಇರಿಸಲು ವಿನೂತನ ವಿನ್ಯಾಸ
- LED ಮಾರ್ಗ ಫಲಕ ಅಳವಡಿಕೆ
- ಒಟ್ಟಾರೆ ಶಕ್ತಿ ಯೋಜನೆಯಿಂದ ಬಸ್ಗಳು ಸರಿಯಾಗಿ ಸಿಗದೇ ಬೇಸತಿದ್ದ ಜನರಿಗೆ ಸಾರಿಗೆ ಇಲಾಖೆ ಹೆಚ್ಚಿನ ಬಸ್ಗಳನ್ನು ಒದಗಿಸಲು ಮುಂದಾಗಿದೆ. ಇದರ ಪ್ರಯೋಜನವನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕಿದೆ.