Sunday, December 22, 2024

ಹಾಸನದಲ್ಲಿ ಬಿಜೆಪಿಯಿಂದ ಕ್ಯಾಂಡಿಡೇಟ್ ಹಾಕ್ತೇವೆ : ಪ್ರೀತಂಗೌಡ

ಹಾಸನ : ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರಕ್ಕೆ ಮಾಜಿ ಶಾಸಕ ಪ್ರೀತಂಗೌಡ ಪ್ರತಿಕ್ರಿಯಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ಬಿಜೆಪಿಯಿಂದ ಕ್ಯಾಂಡಿಡೇಟ್ ಹಾಕ್ತೇವೆ. ಬಹುಶಃ ಜನತಾದಳದವರು ಸಪೋರ್ಟ್ ಮಾಡುವ ದಿನ ಬರಬಹುದು. ಅದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.

ಬಿಜೆಪಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋದು, ಇವತ್ತಿನ ವಾತಾವರಣದಲ್ಲಿ ಒಳಿತು ಅನ್ನೋದು ಕಾರ್ಯಕರ್ತರ‌ ಭಾವನೆ. ಅವರೇನಾದ್ರೂ ಅಲೆಯನ್ಸ್​ಗೆ ಒಪ್ಪಿಕೊಂಡ್ರೆ, ಬಹಶಃ ಜೆಡಿಎಸ್ ಬೇರೆ ಕಡೆ ಸೀಟ್ ಕೇಳಬಹುದು. ಹಾಸನ ಕ್ಷೇತ್ರ ಬಿಜೆಪಿಗೆ ಪೂರಕವಾಗಿರೋ ಕಾರಣಕ್ಕೆ ಬಿಟ್ಟುಕೊಡುವಂತಹ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿಸಿದ್ದಾರೆ.

ಹಾಲಿ ಜೆಡಿಎಸ್ ಸಂಸದರಿರೋ ಕ್ಷೇತ್ರದಲ್ಲಿ ಬಿಜೆಪಿಗೆ ಟಿಕೆಟ್ ಬಿಟ್ಟುಕೊಡೋ ಸಾಧ್ಯತೆ ಇದ್ಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪೂರಕವಾದ ವಾತಾವರಣ ಇರೋದು ಬಿಜೆಪಿ ಪಾರ್ಟಿಗೆ. ಹಾಗಾಗಿ ಅದ್ರಲ್ಲಿ ಬದಲಾವಣೆಗೆ ಆಗಬಹುದು ಎಂಬ ಮಾಹಿತಿ ಹೇಳ್ತಿದ್ದೇನೆ. ಗೆದ್ದಿರೋ ಕ್ಷೇತ್ರ ವಾಪಸ್ಸು ಗೆಲ್ಲಬೇಕು ಅಂತೇನಿಲ್ಲ. ನಾನು 2018ರಲ್ಲಿ ಗೆದ್ದಿದ್ದೆ, 2023ರಲ್ಲಿ ಜನ ಬೇರೆಯವರಿಗೆ ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES