Friday, December 27, 2024

ಸಿದ್ದರಾಮಯ್ಯಗಿಂತ ನಾವು ದೊಡ್ಡವರಲ್ಲ : ಸತೀಶ್ ಜಾರಕಿಹೊಳಿ

ಬೆಳಗಾವಿ: ಕಾಂಗ್ರೆಸ್​ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಚಾಲನೆ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್ ವಿಚಾರಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ತೀರ್ಮಾನ ಅದು, ಸಿಎಂಕ್ಕಿಂತ ನಾವು ದೊಡ್ಡವರಲ್ಲ ಎಂದು ಹೇಳಿದ್ದಾರೆ.

ನಾವು ಜಿಲ್ಲಾ ಕೋರ್ಟ್ ಇದ್ದಂಗೆ, ಅವರು ಹೈಕೋರ್ಟ್ ಮೇಲೆ ಸುಪ್ರೀಂ ಕೋರ್ಟ್ ಇದ್ದಂಗೆ. ನಾವು ಸಿಎಂ ಅವರಿಗೆ ಹಾಗೂ ಅಧ್ಯಕ್ಷರಿಗೆ ಕೇಳಿ ಉತ್ತರ ಕೊಡಬಹುದು. ಇಲ್ಲಿಗೆ ಬಂದಿದ್ದು ಗೊತ್ತಿಲ್ಲ, ಹೋಗಿದ್ದು ಗೊತ್ತಿಲ್ಲ. ಇಲ್ಲಿ ಮಾಡು ಅಂದ್ರು ಮಾಡಲಿಕ್ಕೆ ರೆಡಿ ಆಗಿದ್ದೆವು. ಈಗ ಇಲ್ಲ ಅಂದ್ರು, ಮೈಸೂರಿಗೆ ಪ್ರಯಾಣ ಬೆಳೆಸುತ್ತೇವೆ ಎಂದು ಬೇಸರಿಸಿದ್ದಾರೆ.

ಗೃಹಲಕ್ಷ್ಮೀ ನಮ್ಮದೇ ಆಗೋದು

ಮೊನ್ನೆ ಕ್ಯಾಬಿನೆಟ್ ಅಲ್ಲಿ ಚರ್ಚೆ ಆಯ್ತು ಬೆಳಗಾವಿಯಿಂದ ಮೈಸೂರಿಗೆ ವರ್ಗ ಮಾಡೋದು ಅಂತ. ಕಾರಣವೆನಂದರೆ, ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ವೈನಾಡು ಕಾರ್ಯಕ್ರಮ ಇದೆ. ರಾಹುಲ್ ಗಾಂಧಿಗೆ ಹೋಗಲಿಕ್ಕೆ ಹತ್ತಿರ ಆಗುತ್ತೆ ಅಂತ ಹೇಳಿದ್ರು. ರಾಜ್ಯದಲ್ಲಿ ಎಲ್ಲೆ ಮಾಡಿದ್ರು ಗೃಹಲಕ್ಷ್ಮೀ ನಮ್ಮದೇ ಆಗೋದು ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES