Sunday, January 19, 2025

ಕಾಂಗ್ರೆಸ್ ಅಕ್ರಮಗಳ ಅಂಕಿ ಅಂಶಗಳಿವೆ : ಮೋದಿ ಗುಡುಗು

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಮತ್ತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದಿನ ಸರ್ಕಾರ ಬಡವರ ಹಣ ಲೂಟಿ ಮಾಡಿದೆ. ಹಿಂದಿನ ಸರ್ಕಾರದ ಅಕ್ರಮಗಳ ಅಂಕಿ ಅಂಶಗಳಿವೆ ಎಂದು ಗುಡುಗಿದ್ದಾರೆ.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿರುವ ಮುಖ್ಯಮಂತ್ರಿ ರೈಸ್ ಸರ್ಕಾರಿ ಮಹಾತ್ಮಾ ಗಾಂಧಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೊಸದಾಗಿ ನೇಮಕಗೊಂಡ ಶಿಕ್ಷಕರ ತರಬೇತಿ-ಕಮ್-ಓರಿಯಂಟೇಶನ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದಾರೆ.

2014ಕ್ಕಿಂತ ಮೊದಲು ಬಡವರ ಹಕ್ಕುಗಳು ಮತ್ತು ಅವರ ಹಣವನ್ನು ದೋಚುವ ಭ್ರಷ್ಟಾಚಾರ ಮತ್ತು ಹಗರಣಗಳಯುಗವು ಚಾಲ್ತಿಯಲ್ಲಿತ್ತು. ಆದರೆ, ಈಗ ಪ್ರತಿ ಪೈಸೆಯೂ ನೇರವಾಗಿ ಅವರ ಬ್ಯಾಂಕ್ ಖಾತೆಗಳನ್ನು ತಲುಪುತ್ತಿದೆ ಎಂದು ಹೇಳಿದ್ದಾರೆ.

ಹೆಚ್ಚು ಜನ ತೆರಿಗೆ ಪಾವತಿಸುತ್ತಿದ್ದಾರೆ

ನೀತಿ ಆಯೋಗದ ವರದಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಐದು ವರ್ಷಗಳಲ್ಲಿ 13.50 ಕೋಟಿ ಭಾರತೀಯರು ಬಿಪಿಎಲ್ ವರ್ಗದಿಂದ ಹೊರಬಂದಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಈಗ ತೆರಿಗೆ ಪಾವತಿಸುತ್ತಿದ್ದಾರೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಇದು ಸರ್ಕಾರವು ತಮ್ಮ ಹಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ನಂಬಿಕೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪರಂಪರಾಗತ ಕೌಶಲ್ಯವನ್ನು ಮೈಗೂಡಿಸಿಕೊಂಡಿರುವ ಕುಶಲಕರ್ಮಿಗಳಿಗಾಗಿ ನಾವು ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES