ಮಂಗಳೂರು : ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕದಲ್ಲಿ ಇರುವ ಪಿತ್ರಾರ್ಜಿತ ಜಮೀನಿನಲ್ಲಿ 20 ಸೆಂಟ್ಸ್ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ಉಚಿತವಾಗಿ ಕೊಟ್ಟ ಸ್ಪೀಕರ್ ಯು.ಟಿ ಖಾದರ್.
ಯು.ಟಿ. ಖಾದರ್ ಮತ್ತು ನಾಗಾರಾಧನೆಗೆ ಯಾವ ರೀತಿ ಸಂಬಂಧ?
ಹೌದು, ಈ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಾಮಾನ್ಯ. ಹಿಂದಿನ ಹಿರಿಯರ ಕಾಲದಲ್ಲಿ ಖಾದರ್ ಅವರ ಎಕ್ರೆಗಟ್ಟಲೆ ಜಮೀನು ದಳವಾಯಿ ಕುಟುಂಬದ ಅಧೀನದಲ್ಲಿತ್ತು. ಆದರೆ ಭೂಮಸೂದೆ ಕಾನೂನಿನಲ್ಲಿ ಖಾದರ್ ಕುಟುಂಬದ ಹಿರಿಯರಿಗೆ ಆ ಜಮೀನು ಸಿಕ್ಕಿತ್ತು. ಆದ್ದರಿಂದ ಜಮೀನಿನಲ್ಲಿ ಪಾಲು ಮಾಡಿದಾಗ ಪಿತ್ರಾರ್ಜಿತ ಸೊತ್ತಾಗಿ ಖಾದರ್ ಅವರ ಪಾಲಾಯಿತು.
ಇದನ್ನು ಓದಿ : ಹಾವೇರಿಯಲ್ಲಿ ಮುಂದುವರೆದ ಕಳ್ಳರ ಕೈಚಳಕ
ಈ ಹಿನ್ನೆಲೆ ದಳವಾಯಿ ಕುಟುಂಬದ ನಾಗನ ಕಟ್ಟೆ ಅದೇ ಜಮೀನಿನಲ್ಲಿದ್ದು, ನಾಗಸಾನಿಧ್ಯ ಮುಸ್ಲಿಂ ಧರ್ಮದವರ ಸ್ಥಳದಲ್ಲಿ ಇರುವುದರಿಂದ ದಳವಾಯಿ ಕುಟುಂಬ ಬೇರೆ ಕಡೆ ಆರಾಧನೆ ಮಾಡುತ್ತಿದ್ದರು. ಈ ಪರಿಣಾಮ ಮೂಲಸ್ಥಾನ ನಾಗನಕಟ್ಟೆಯಲ್ಲಿ ಪೂಜೆಯಾಗದ ಹಿನ್ನೆಲೆ ನಾಗರಾಧನೆಗೆ ತೊಡಕಾಗಿತ್ತು.
ಅದರಿಂದ ಕೊನೆಗೆ ನಾಗನಕಟ್ಟೆಯ ಜಾಗದ 10 ಸೆಂಟ್ಸ್ ಸ್ಥಳವನ್ನು ಖರೀದಿಗೆ ಖಾದರ್ ಅವರಿಗೆ ಬೇಡಿಕೆ ಇಟ್ಟಿದ್ದರು. ಬಳಿಕ ವಿಷಯ ತಿಳಿದ ಯು.ಟಿ.ಖಾದರ್ ಕೂಡಲೇ ಆ ಜಮೀನಿನಲ್ಲಿ 10ಕ್ಕೆ 10 ಸೆಂಟ್ಸ್ ಸೇರಿಸಿ ಒಟ್ಟು 20 ಸೆಂಟ್ಸ್ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ಬಿಟ್ಟುಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಅಂದಿನಿಂದ ಅಲ್ಲಿ ವಿಜ್ರಂಬಣೆಯ ನಾಗಾರಾಧನೆ ನಡೆಯುತ್ತಿದೆ. ನಾಗರ ಪಂಚಮಿಯ ಈ ದಿನವು ಕೂಡ ದಳವಾಯಿ ಕುಟುಂಬದವರೆಲ್ಲ ಅಲ್ಲಿ ಬಂದು ಸೇರುತ್ತಾರೆ. ಸ್ಪೀಕರ್ ಯು.ಟಿ.ಖಾದರ್ ಅವರು ಸಹೋದರ ಧರ್ಮಗಳ ಜೊತೆಗಿನ ಬಾಂಧವ್ಯಕ್ಕೂ ಎಷ್ಟು ಗೌರವ ಕೊಡುತ್ತಾರೆ ಎನ್ನುವುದಕ್ಕೆ ಈವೊಂದು ಉದಾಹರಣೆ ಸಾಕ್ಷಿಯಾಗಿದೆ.