Wednesday, January 22, 2025

ನಿನ್ನ ರೇಟ್ ಎಷ್ಟು, ಎಷ್ಟಕ್ಕೆ ಬರುತ್ತೀಯಾ? ಎಂದಿದ್ದ ಕಾಮುಕ ಅರೆಸ್ಟ್

ಬೆಂಗಳೂರು : ಇಂಡಿಗೋ ವಿಮಾನದಲ್ಲಿ ಗಗನಸಖಿ ಮೇಲೆ ಕೈ ಹಾಕಿ, ನಿನ್ನ ರೇಟ್ ಎಷ್ಟು? ಎಷ್ಟಕ್ಕೆ ಬರ್ತೀಯಾ? ಎಂದು ಲೈಂಗಿಕ ಕಿರುಕುಳ ನೀಡಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ.

ವಿದೇಶಿ ಪ್ರಜೆ ಅಕ್ರಂ ಅಹಮದ್​ ಬಂಧಿತ ಆರೋಪಿ. ಮಾಲ್ಡೀವ್ಸ್​ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಿಸಿನೆಸ್ ವೀಸಾದಲ್ಲಿ ಭಾರತಕ್ಕೆ ಪ್ರಯಾಣ ಮಾಡುತ್ತಿದ್ದನು. ಈ ವೇಳೆ ಆರೋಪಿ ಅಕ್ರಂ ಅಹಮದ್ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಸಂಬಂಧ ದೇವನಹಳ್ಳಿ ಏರ್​​ಪೋರ್ಟ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆಗಸ್ಟ್ 18 ಶುಕ್ರವಾರ ಸಂಜೆ ಮಾಲ್ಡೀವ್ಸ್ ನ ಮಾಲೆಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಗಗನಸಖಿಯೊಬ್ಬರಿಗೆ ಕಿರುಕುಳ ನೀಡಿ, ಇತರ ಇಬ್ಬರು ಮಹಿಳಾ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಈ ಬಗ್ಗೆ ಗಗನಸಖಿಯರು ಪೈಲಟ್ ಗೆ ಮಾಹಿತಿ ನೀಡಿದ್ದರು.

ಪೈಲಟ್ ನೀಡಿದ ದೂರಿನ ಮೇರೆಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಬಂದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 ಮತ್ತು 409 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES