ಬೆಂಗಳೂರು : ಪಡಿತರ ಚೀಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಧೀ ವಿಸ್ತರಿಸಿ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ.
ಈ ಹಿಂದೆ ಆಗಸ್ಟ್ 21, ಅಂದರೆ ಇಂದಿನವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಫಲಾನುಭವಿ(ಗ್ರಾಹಕರ)ಗಳ ಒತ್ತಾಯದ ಮೇರೆಗೆ ತಿದ್ದುಪಡಿ ದಿನಾಂಕವನ್ನು ಮುಂದೂಡಲಾಗಿದೆ.
ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿ ಸೇವೆಗಳಿಗೆ ಕಾಲಾವಕಾಶ ನೀಡಲಾಗುವುದು. ಅರ್ಹ ಗ್ರಾಹಕರು ಸೇವೆಯನ್ನು ತ್ವರಿತವಾಗಿ ಪಡೆಯಬೇಕು ಎಂದು ಇಲಾಖೆ ನಿರ್ದೇಶಕ ಗ್ಯಾನೇಂದ್ರ ಕುಮಾರ್ ತಿಳಿಸಿದ್ದಾರೆ.
ಪಡಿತರಕ್ಕೆ ಹೊಸದಾಗಿ ಹೆಸರನ್ನು ಸೇರಿಸಲು, ತೆಗೆದು ಹಾಕಲು ಅಥವಾ ತಿದ್ದುಪಡಿ ಮಾಡಲು ಅನುಮತಿ ನೀಡಲಾಗಿದೆ. ರೇಷನ್ ಕಾರ್ಡ್ನಲ್ಲಿ ಹೆಸರುಗಳ ತಿದ್ದುಪಡಿ ಸೇರಿದಂತೆ ವಿಳಾಸದ ಅಡ್ರೆಸ್ ಕೂಡ ತಿದ್ದುಪಡಿ ಮಾಡಬಹುದು.
ಅರ್ಹ ಫಲಾನುಭವಿಗಳು ಯಾರು?
- ವಾರ್ಷಿಕ ಆದಾಯ 1.2 ಲಕ್ಷ ಮೀರಿರಬಾರದು
- 3 ಹೆಕ್ಟರ್‌ಗಿಂತ ಹೆಚ್ಚಿನ ಒಣಭೂಮಿ ಹೊಂದಿರಬಾರದು
- ವೈಟ್ ಬೋರ್ಡ್ 4 ಚಕ್ರದ ವಾಹನ ಇರಬಾರದು
- ಯಾವುದೇ ಸರ್ಕಾರಿ ನೌಕರರಾಗಿರಬಾರದು
- ನಗರದ ಭಾಗದಲ್ಲಿ ಮನೆಯ ವಿಸ್ತೀರ್ಣ 1000 sqt ಮೀರಬಾರದು
- ವಾಣಿಜ್ಯ ತೆರಿಗೆ, ಆದಾಯ ತೆರಿಗೆ, IT ರಿಟರ್ನ್ಸ್ ಪಾವತಿದಾರರು