ಬೆಂಗಳೂರು : NEP ನಮ್ಮ ರಾಜ್ಯದಲ್ಲಿ ಮುಂದುವರಿಸಲ್ಲ. ಸದ್ಯದಲ್ಲೇ ಸಮಿತಿ ರಚನೆ ಮಾಡುತ್ತೇವೆ. No Nagpur Education Policy ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಒಂದು ವಾರದಲ್ಲಿ ಸಮಿತಿ ರಚನೆ ಮಾಡ್ತೀವಿ. ಹೊಸ ಶಿಕ್ಷಣ ನೀತಿ ಇಲ್ಲ, ಹಳೇ ಶಿಕ್ಷಣ ನೀತಿ ಇರಲಿದೆ. ರಾಜ್ಯ ಸರ್ಕಾರದ ಹೊಸ ಪಾಲಿಸಿ ತರಲಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಪ್ರೈಮೆರಿ ಎಜುಕೇಶನ್ ಹಾಗೂ ಹೈಯರ್ ಎಜುಕೇಶನ್ ಬಗ್ಗೆ ಸಿಎಂ ಸಭೆ ಮಾಡಿದರು. Nepಯ ಸಾಧಕ ಬಾಧಕ ಬಗ್ಗೆ ಚರ್ಚೆ ಮಾಡಿದರು. ಕರ್ನಾಟಕದ ಶಿಕ್ಷಣ ಮಟ್ಟ ಬಹಳ ಉತ್ತಮವಾಗಿದೆ ಎಂದು ವಿವಿ ಕುಲಪತಿಗಳು ಹೇಳಿದ್ದಾರೆ. ಕೇಂದ್ರದಿಂದ ಬರುವ ಹಣ ಕಡಿಮೆ ಬರ್ತಿದೆ. ಶಿಕ್ಷಣ ನೀತಿ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ನಮಗೆ ಸಮಾಧಾನ ಇಲ್ಲ
NEP 2021ರಲ್ಲಿ ಕರ್ನಾಟಕದಲ್ಲಿ ತರಲು ಪ್ರಯತ್ನ ಮಾಡಿದ್ರು. ಮಧ್ಯಪ್ರದೇಶ ಉತ್ತರ ಪ್ರದೇಶದಲ್ಲಿ ಎಲ್ಲೂ NEP ಇಲ್ಲ. ಆದರೆ, ಕರ್ನಾಟಕದಲ್ಲಿ ತರಾತುರಿಯಲ್ಲಿ ತರಲು ಯತ್ನಸಿದ್ದಾರೆ. NEPಗೆ ಬೇಕಾಗುವ ಬೇಸಿಕ್ ನೀಡ್ ಸಹ ಇರಲಿಲ್ಲ. ಇದರಲ್ಲಿ ನಮಗೆ ಸಮಾಧಾನ ಇಲ್ಲ. ಹಳೇ ಶಿಕ್ಷಣ ನೀತಿಯನ್ನೇ ತರಲು ಹೋಗಿದ್ದಾರೆ ಎಂದು ಡಿಕೆಶಿ ಮಾಹಿತಿ ನೀಡಿದರು.