Monday, December 23, 2024

ಪೋಲಿಸ್ ಮೆಟ್ಟಿಲೇರಿದ ಅಜ್ಜ,ಅಜ್ಜಿ ಲವ್ ಸ್ಟೋರಿ ; ಏನಿದು ಪ್ರೇಮ ಕಹಾನಿ?

ಬೆಂಗಳೂರು : 70 ವರ್ಷದ ಅಜ್ಜ ಪ್ರೀತಿಸಿ ಮೋಸ ಮಾಡಿದ್ದಾನೆ ಎಂದು 63 ವರ್ಷದ ಅಜ್ಜಿ ಪೋಲಿಸರಿಗೆ ದೂರು ನೀಡಿದ್ದಾರೆ. ಅಚ್ಚರಿ ಎನ್ನಿಸಿದರು ಇದು ಸತ್ಯ. ಈ ವಿಚಿತ್ರ ಪ್ರೇಮ ಕಹಾನಿ ಬೆಳಕಿಗೆ ಬಂದಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ.

ಪ್ರೀತಿಗೆ ವಯಸ್ಸು ಅಡ್ಡಿಯಾಗುವುದಿಲ್ಲ ಅಂತಾರೆ. ಆದರೆ ಇನ್ನು ಕೆಲವರು ಪ್ರೀತಿ-ಪ್ರೇಮಕ್ಕೆ ಒಂದು ವಯಸ್ಸು ಅಂತ ಇರುತ್ತೆ. ಆ ವಯಸ್ಸಲ್ಲೇ ಪ್ರೀತಿ ಮಾಡಿದ್ರೆ ಚಂದ ಅಂತಾರೆ. ದಯಮಣಿ (63) ರ ವೃದ್ಧೆ, ಹಾಗೂ ಲೋಕನಾಥನ್ (70) ಎಂಬ ವೃದ್ಧನ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿತ್ತು. ಹಲವು ತಿಂಗಳು ಪ್ರೇಮಿಗಳಂತೆ ಸಿನಿಮಾ ಪಾರ್ಕ ಎಂದು ಓಡಾಟ ನಡೆಸಿ, ಪ್ರೇಮಿಗಳಂತೆ ಸುತ್ತಾಡುತ್ತಿದ್ದರು.

ಬಳಿಕ ನಂತರದ ದಿನಗಳಲ್ಲಿ ದಯಾಮಣಿಯನ್ನ ಅವಾಯ್ಡ್ ಮಾಡುತ್ತಿದ್ದ ವೃದ್ಧ ಲೋಕನಾಥನ್.

ಇದನ್ನು ಓದಿ : ಒಣಗುತ್ತಿರುವ ಬೆಳೆ ; ಮಳೆರಾಯನ ಮೊರೆ ಹೋದ ರೈತರು

ಈ ಸಂಬಂಧ ಪ್ರಶ್ನೆ ಮಾಡಿದ ದಯಮಣಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನಂತೆ. ಅಷ್ಟೇ ಅಲ್ಲದೆ ನಂತರ ವೃದ್ಧ ಕರೆದಾಗ ಹೋಗಿಲ್ಲ ಎಂಬ ಕಾರಣಕ್ಕೆ ಕೆಟ್ಟ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಲೋಕನಾಥನ್. ಈ ಘಟನೆ ಹಿನ್ನೆಲೆ ನೊಂದ ವೃದ್ಧೆ, ಸದ್ಯ ಮದ್ವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ವೃದ್ದ ಲೋಕನಾಥ್ ವಿರುದ್ಧ ದೂರು ನೀಡಿರುವ ದಯಾಮಣಿ.

ಈ ಸಂಬಂಧ ನನಗೆ ನ್ಯಾಯ ಕೊಡಿಸಿ ಎಂದು ಈಸ್ಟ್ ಝೋನ್ ವುಮೆನ್ ಪೊಲೀಸ್ ಠಾಣೆ ಮೆಟ್ಟಿಲೇರಿದ ವೃದ್ದೆ. ಸದ್ಯ ವೃದ್ಧನ ವಿರುದ್ಧ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES