Wednesday, January 22, 2025

ಏಷ್ಯಾಕಪ್​ಗೆ ಭಾರತ ತಂಡ ಪ್ರಕಟ : ಕನ್ನಡಿಗ ಇನ್, ಸಂಜು ಔಟ್

ಬೆಂಗಳೂರು : ಏಕದಿನ ಏಷ್ಯಾಕಪ್​ಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಉಪನಾಯಕರಾಗಿ ಹಾರ್ದಿಕ್ ಪಾಂಡ್ಯ ಮುಂದುವರಿಯಲಿದ್ದಾರೆ.

ಆಗಸ್ಟ್ 30ರಿಂದ ಏಕದಿನ ಏಷ್ಯಾಕಪ್‌ ಟೂರ್ನಿ ಆರಂಭವಾಗಲಿದೆ. ಹೀಗಾಗಿ, 17 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.

ಭಾರತ ತಂಡ :

ರೋಹಿತ್ ಶರ್ಮಾ(ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ(ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ

ರಿಸರ್ವ್ ಆಟಗಾರ :

ಸಂಜು ಸ್ಯಾಮ್ಸನ್

ತಿಲಕ್​ ಅಚ್ಚರಿ ಆಯ್ಕೆ

ಯುವ ಬ್ಯಾಟರ್ ತಿಲಕ್ ವರ್ಮಾ ಅಚ್ಚರಿ ಎಂಬಂತೆ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ತಿಲಕ್ ವರ್ಮಾ ಆಯ್ಕೆಯಿಂದ ಸಂಜು ಸ್ಯಾಮ್ಸನ್ 17 ಸದಸ್ಯರ ತಂಡದಿಂದ ಹೊರಬಿದ್ದಿದ್ದಾರೆ. ಆದರೂ, ಸ್ಯಾಮ್ಸನ್ ಅವರನ್ನು ಭಾರತ ತಂಡದಲ್ಲಿ ರಿಸರ್ವ್ ಆಟಗಾರರನ್ನಾಗಿ ಇರಿಸಲಾಗಿದೆ.

ಚಾಹಲ್ ಔಟ್

ಗೂಗ್ಲಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರಿಗೆ ಆಯ್ಕೆ ಸಮಿತಿ ಬಿಗ್ ಶಾಕ್ ನೀಡಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಚಾಹಲ್ ಏಷ್ಯಾಕಪ್ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಆಯ್ಕೆ ಮಂಡಳಿ ಚಾಹಲ್​ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿಲ್ಲ.

RELATED ARTICLES

Related Articles

TRENDING ARTICLES