Wednesday, January 8, 2025

ಸಾಲಭಾದೆಯಿಂದ ಮನನೊಂದು ರೈತ ಆತ್ಮಹತ್ಯೆ

ವಿಜಯಪುರ : ಸಾಲಭಾದೆ ತಾಳಲಾರದೆ ಮನನೊಂದು ರೈತ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅರ್ಜನಾಳ ಗ್ರಾಮದಲ್ಲಿ ನಡೆದಿದೆ.

ಅಶೋಕ ಜೆಟ್ಟೆಪ್ಪ ಶಿಗಣಾಪುರ (52) ಮೃತಪಟ್ಟಿರುವ ದುರ್ದೈವಿ. ಮೃತ ರೈತ 15 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದನು. ಈ ಸಂಬಂಧ ಝಳಕಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲಸಂಗಿ ಯೂನಿಯನ್ ಬ್ಯಾಂಕ್‌ನಲ್ಲಿ 2 ಲಕ್ಷ ರೂ., ಅರ್ಜನಾಳ ಗ್ರಾಮದ ಪಿಕೆಪಿಎಸ್ ಬ್ಯಾಂಕ್ ನಲ್ಲಿ 65 ಸಾವಿರ ರೂ. ಊರ ಮನಿಸಾಲ 5 ಲಕ್ಷ ಸಾಲ ಮಾಡಿದ್ದರು. ಬಡ್ಡಿ ಸೇರಿ ಒಟ್ಟು 15 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಇದರಿಂದ ಮನನೊಂದು ಆತ್ಮಹತ್ಯಗೆ ಶರಣಾಗಿದ್ದಾರೆ.

ಮಕಾಡೆ ಮಲಗಿದ ಬಸ್ ನಿಲ್ದಾಣ

ಬೆಂಗಳೂರಿನ ಫುಟ್​ಪಾತ್ ಮೇಲೆ ಬಸ್ ನಿಲ್ದಾಣ ಮಕಾಡೆ ಮಲಗಿದೆ. ಒಂದು ತಿಂಗಳಿಂದ ಬಿದ್ದಿದ್ದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಬೃಹತ್ ಗಾತ್ರದ ಬಸ್ ನಿಲ್ದಾಣ ಧರೆ ಗುರುಳಿದೆ. ಕಾಲೇಜು ವಿದ್ಯಾರ್ಥಿಗಳು ಫುಟ್​ಪಾತ್ ಇಲ್ಲದೆ ರಸ್ತೆಗಿಳಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳಿಂದ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

RELATED ARTICLES

Related Articles

TRENDING ARTICLES