ಬೆಂಗಳೂರು : ಮಸಾಲೆ ಅರಿಯೋದು ಡಿ.ಕೆ ಶಿವಕುಮಾರ್ ಅವರಿಗೆ ಮಾತ್ರ ಗೊತ್ತಿರುವ ವಿದ್ಯೆಯಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾರು ಕೋಳಿ ಕೇಳಿ ಖಾರ ಅರಿಯಲ್ಲ. ನಾವು ಮಸಾಲೆ ಅರಿಯುತ್ತೇವೆ, ನಮಗೂ ಮಸಾಲೆ ಅರಿಯೋಕೆ ಬರುತ್ತದೆ. ಮಲೆನಾಡು ಅಡುಗೆ ತಿಂದವರಿಗೆ ಗೊತ್ತು ಎಂದು ಚಾಟಿ ಬೀಸಿದ್ದಾರೆ.
ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖೆ ವಿಚಾರವಾಗಿ ಮಾತನಾಡಿ, ಅವರ ಮೇಲೆ ನಂಬಿಕೆ ಇಲ್ಲ. ಅವರು ಈ ಹಿಂದೆ ದತ್ತಪೀಠದಲ್ಲೂ ಹೀಗೆ ಮಾಡಿದ್ದರು. ಕಾಂಗ್ರೆಸ್ ಮರ್ಜಿಯಲ್ಲಿ ಇರೋರು ನಾಗಮೋಹನ್ ದಾಸ್. ಟೂಲ್ ಕಿಟ್ ರಾಜಕೀಯ ಮಾಡೋದಕ್ಕೆ ನಾಗಮೋಹನ್ ದಾಸ್ ಕಮಿಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಧಛ ಕಾರಿಗೆ ಪೆಟ್ರೋಲ್ ಹಾಕದ ಸ್ಥಿತಿ
ನಿರ್ದಿಷ್ಟ ಪ್ರಕರಣದ ಬಗ್ಗೆ ಲೋಕಾಯುಕ್ತಕ್ಕೆ ಎಸಿಬಿಗೆ ದೂರು ನೀಡಲು ಅವಕಾಶ ಇದೆ. ಆದರೆ, ಫೇಕ್ ನರೆಟಿವ್ ಸೃಷ್ಟಿ ಮಾಡಲು, ಟೂಲ್ ಕಿಟ್ ಭಾಗವಾಗಿ ನಾಗಮೋಹನ್ ದಾಸ್ ಕಮಿಟಿ ರಚನೆ ಮಾಡಲಾಗಿದೆ. ಈ ಸರ್ಕಾರದ ಪರಿಸ್ಥಿತಿ ಹೇಗೆ ಇದೆ ಅಂದರೆ, ಜಿಲ್ಲಾಧಿಕಾರಿ ಕಾರಿಗೆ ಪೆಟ್ರೋಲ್ ಹಾಕಲೂ ಆಗದ ಸ್ಥಿತಿ ಎಂದು ಲೇವಡಿ ಮಾಡಿದ್ದಾರೆ.
ಯಾರು ಪಕ್ಷ ಬಿಟ್ಟು ಹೋಗಲ್ಲ
ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಹೋಗುತ್ತಾರೆ ಎಂಬ ವದಂತಿ ಬಗ್ಗೆ ಮಾತನಾಡಿ, ಪಕ್ಷ ಬಿಟ್ಟು ಹೋಗ್ತಾರೆ ಅನ್ನೋದು ಊಹಾಪೋಹ. ಪಕ್ಷ ಅಧಿಕಾರ ಇಲ್ಲದಾಗಲೂ ಸೈದ್ದಾಂತಿಕವಾಗಿ ಬದ್ದರಾಗಿ ಪಕ್ಷ ಕಟ್ಡಿದ್ದೇವೆ. ಯಾರು ಯಾರು ಪಕ್ಷ ಬಿಟ್ಟು ಹೋಗ್ತಾರೆ ಅಂತ ಚರ್ಚೆಯಿದೆ. ಅದರಲ್ಲಿ ಯಾವುದೇ ಹುರುಳಿಲ್ಲ. ಯಾರು ಪಕ್ಷ ಬಿಟ್ಟು ಹೋಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.