Wednesday, January 22, 2025

ನಾವು ಯಡಿಯೂರಪ್ಪ ಟೀಮ್​ನಲ್ಲಿ ಇದ್ದಿವಿ : ಉಮೇಶ್ ಜಾಧವ್

ಕಲಬುರಗಿ : ನಾವು ಯಡಿಯೂರಪ್ಪ ಟೀಮ್​ನಲ್ಲಿ ಇದ್ದಿವಿ, ಮುಂಬೈ ಟೀಮ್​ನಲ್ಲಿಲ್ಲ ಎಂದು ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಘರ್ ವಾಪಸ್ ಚರ್ಚೆ ವಿಚಾರವಾಗಿ ಕಲಬುರಗಿಯಲ್ಲಿ ಮಾತನಾಡಿರುವ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಘರ್ ವಾಪಸ್ ಬಗ್ಗೆ ಚರ್ಚೆ ನಡೆಯುತ್ತಿದೆ. ಆದ್ರೆ, ಅಧಿಕೃತವಾಗಿ ಪಾರ್ಟಿ ಬಿಟ್ಟು ಹೊಗ್ತೆನೆಂದು ಯಾರು ಹೇಳಿಲ್ಲ. ನನಗೂ ಯಾವುದೆ ಕರೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಶಾಸಕ ಎಸ್.ಟಿ ಸೋಮಶೇಖರ್ ಬಿಜೆಪಿಯಲ್ಲಿ ಅಸಮಾಧಾನ ವಿಚಾರವಾಗಿ ಮಾತನಾಡಿ, ರಾಜಕೀಯ ಪಾರ್ಟಿಯಲ್ಲಿ ಒಂದು ಪಾರ್ಟಿಯಿಂದ ಇನ್ನೊಂದು ಪಾರ್ಟಿ ಸೇರಿದಾಗ ಹಳೆ ಕಾರ್ಯಕರ್ತರ ಮಧ್ಯೆ ಅಸಮಾಧಾನ ಇರುತ್ತೆ. ಅದೆಲ್ಲಾ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಎಸ್ ಟಿ ಸೋಮಶೇಖರ್ ಗೆ ಯಡಿಯೂರಪ್ಪ ಬೊಮ್ಮಾಯಿ ಕರೆದು ಮಾತಾನಾಡಿ ಸಮಜಾಷಿಯಾಸಿದ್ದಾರೆ ಎಂದು ತಿಳಿಸಿದ್ದಾರೆ.

ನಾನಂತು ಪಕ್ಷ ಬಿಟ್ಟು ಹೋಗಲ್ಲ

ನಾನು ಮುಂಬೈ ಟೀಮ್​ನಲ್ಲಿ ಮೊದಲಿನಿಂದಲೂ ಇಲ್ಲ. ನಾವು ಮುಂಬೈ ಟೀಮ್ ಅಂತ ಯೂನಿಟಿ ಮಾಡಿಲ್ಲ. ನಾವು ಯಡಿಯೂರಪ್ಪ ಟೀಮ್​ನಲ್ಲಿ ಇದ್ದಿವಿ, ಮುಂಬೈ ಟೀಮ್ ನಲ್ಲಿಲ್ಲ. ಪಾರ್ಟಿಯಿಂದ ಲೀಡರ್ ಹೊರ ಹೊದ್ರು ಮತದಾರರು ಹೋಗೊದಿಲ್ಲ. ಕಾಂಗ್ರೆಸ್ ಘರ್ ವಾಪಸ್​ಗೆ ಬಿಜೆಪಿ ರಿವರ್ಸ್ ಆಪರೇಷನ್ ಬಗ್ಗೆ ನಮ್ಮ ವರಿಷ್ಟರು ನಿರ್ಧಾರ ಮಾಡ್ತಾರೆ. ನಾನಂತು ಪಕ್ಷ ಬಿಟ್ಟು ಹೋಗಲ್ಲ ಎಂದು ಹೇಳಿದ್ದಾರೆ.

ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ತಾರೆ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ 25 ಸೀಟ್ ಗೆಲ್ಲುವ ವಿಶ್ವಾಸ ಇದೆ. ಚುನಾವಣೆ ಬಂದಾಗ ಎಲ್ಲಾ ಪಾರ್ಟಿಯವರು ಬೇರೆ ಬೇರೆ ಲೀಡರ್​ಗಳನ್ನ ಕರೆತರುವ ಪ್ರಯತ್ನ ನಡೆಯುತ್ತೆ. ಲೋಕಸಭಾ ಚುನಾವಣೆ ದೊಡ್ಡ ಎಲೆಕ್ಷನ್. ಯಾರು ಪಾರ್ಟಿ ಬಿಟ್ಟು ಹೋಗಲ್ಲ. ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES