ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತ ಭಾರಿ ಸದ್ದು ಮಾಡುತ್ತಿದ್ದು, ಶೀಘ್ರದಲ್ಲೇ ಬಿಜೆಪಿಯ ಮೊದಲ ವಿಕೆಟ್ ಪತನವಾಗುವ ಮುನ್ಸೂಚನೆ ಲಭ್ಯವಾಗಿದೆ.
ಪವರ್ ಟಿವಿಗೆ ಜಂಪಿಂಗ್ ಪಾಲಿಟಿಕ್ಸ್ನ ಎಕ್ಸ್ಕ್ಲ್ಯೂಸಿವ್ ಮಾಹಿತಿ ಲಭ್ಯವಾಗಿದೆ. ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕಮಲಕ್ಕೆ ‘ಕೈ’ ಕೊಟ್ಟು ಕಾಂಗ್ರೆಸ್ ಪಕ್ಷ ಸೇರುತ್ತಾರೆಯೇ? ಎಂದು ಹಬ್ಬಿದ್ದ ಗೊಂದಲಕ್ಕೆ ಪುರಾವೆ ಸಿಕ್ಕಿದೆ.
ಶಾಸಕ ಎಸ್.ಟಿ ಸೋಮಶೇಖರ್ ಅವರು ಲೆಟರ್ ಹೆಡ್‌ನಲ್ಲಿ ಬಿಜೆಪಿಯ ಚಿಹ್ನೆ ಕೈ ಬಿಟ್ಟಿದ್ದಾರೆ. ಇಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಸಿಎಂಗೆ ಕೊಟ್ಟಿರುವ ಮನವಿ ಪತ್ರದಲ್ಲಿ ಬಿಜೆಪಿಯ ‘ಕಮಲ’ ಚಿಹ್ನೆ ಮಾಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿಯೂ ‘ಕಮಲ ಚಿಹ್ನೆ’ ಬಳಸದಿರುವುದು ಇದಕ್ಕೆ ಪುಷ್ಠಿ ನೀಡಿದಂತಿದೆ.
ಸಿಎಂ ಭೇಟಿಯಾದ ಎಸ್.ಟಿ.ಎಸ್
ಸಿಎಂ ಸಿದ್ದರಾಮಯ್ಯರನ್ನು ಶಾಸಕ ಎಸ್.ಟಿ ಸೋಮಶೇಖರ್ ಭೇಟಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ. ಸೋಮಶೇಖರ್ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ಗೆ ಮರಳುತ್ತಾರೆ ಎಂಬ ವದಂತಿ ನಡುವೆಯೇ ಎಸ್ಟಿಎಸ್ ಸಿಎಂ ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಜೆಡಿಎಸ್ ನಿಂದ ಬಂದವರು ಹೋಗ್ತಿದಾರೆ
ಸಿಎಂ ಭೇಟಿ ಬಳಿಕ ಮಾತನಾಡಿರುವ ಎಸ್. ಟಿ.ಸೋಮಶೇಖರ್ ಅವರು, ಕಳೆದ ಒಂದು ವಾರದಿಂದ ಆಪಾಯಿನ್ ಮೆಂಟ್ ಕೇಳಿದ್ದೆ. 5 ಗಂಟೆಗೆ ಬರುವಂತೆ ಸಿಎಂ ಕರೆ ಮಾಡಿದ್ರು. ಕ್ಷೇತ್ರದ 3 ಬೇಡಿಕೆ ಬಗ್ಗೆ ಚರ್ಚೆ ಮಾಡಿದೆ. ನಾಳೆ 3 ಗಂಟೆಗೆ ಬಿಬಿಎಂಪಿ ಅಧಿಕಾರ ಕರೆಸಿ, ಮಾತನಾಡುವುದಾಗಿ ಹೇಳಿದ್ರು. ನಮ್ಮ ಬೆಂಬಲಿಗರು ಕಾಂಗ್ರೆಸ್ ಸೇರ್ತಿಲ್ಲ. ಜೆಡಿಎಸ್ ನಿಂದ ಬಂದವರು ಹೋಗ್ತಿದಾರೆ. ಯಾರಾದರೂ ಹೋದ್ರೆ ಆಲ್ಟರ್ನೇಟಿವ್ ಸಿಕ್ತಾರೆ ಎಂದು ಹೇಳಿದರು.