Thursday, January 23, 2025

ಹೆಸರು ಬದಲಿಸಿಕೊಂಡ ಮಾಲಾಶ್ರೀ ಪುತ್ರಿ

ಬೆಂಗಳೂರು : ಕನಸಿನ ರಾಣಿ ಮಾಲಾಶ್ರೀ, ನಿರ್ಮಾಪಕ ರಾಮ ಅವರ ಪುತ್ರಿ ರಾಧನಾ ರಾಮ್ ಈಗ ತಮ್ಮ ಹೆಸರನ್ನು ಆರಾಧನ ಎಂದು ಬದಲಿಸಿಕೊಂಡಿದ್ದಾರೆ.

ನಾಯಕಿಯಾಗಿ ಮಿಂಚಿದ್ದ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಪುತ್ರಿ ಕೂಡ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿದ ಮಾಲಾಶ್ರೀ ಅವರು ನಾನು ರಾಕ್ ಲೈನ್ ವೆಂಕಟೇಶ್ ಹಾಗೂ ತರುಣ್, ಸುಧೀರ್ ಮೂರು ಜನ ಚರ್ಚಿಸಿ “ರಾಧನಾ ರಾಮ್” ಬದಲಿಗೆ “ಆರಾಧನಾ” ಎಂಬ ಹೆಸರನ್ನು ಆಯ್ಕೆ ಮಾಡಿದ್ದೇವೆ. ಈ ಹೆಸರು ಕಾಟೇರ ಸಿನಿಮಾಕ್ಕೆ ಮಾತ್ರವಲ್ಲ.  ಇನ್ನು ಮುಂದೆ ನನ್ನ ಮಗಳ ಹೆಸರು ಆರಾಧನಾ. ಮುಂದಿನ ಚಿತ್ರಗಳಲ್ಲೂ ಸಹ ಆರಾಧನಾ ಎಂಬ ಹೆಸರಿನಲ್ಲಿಯೇ ನಟಿಸಲಿದ್ದಾರೆ.

ಇದನ್ನು ಓದಿ : ಕ್ಷೇತ್ರಪತಿ’ ಮಾಡ್ರನ್​ ‘ಬಂಗಾರದ ಮನುಷ್ಯ’: ಅನ್ನ ತಿನ್ನೋರೆಲ್ಲಾ ಮಿಸ್​ ಮಾಡ್ದೆ ನೋಡಿ

ರಾಕ್​ಲೈನ್ ವೆಂಕಟೇಶ್ ನಿರ್ಮಾಣ ಮತ್ತು ತರುಣ್, ಕಿಶೋರ್ ಮತ್ತು ಸುಧೀರ್ ನಿರ್ದೇಶನದ ಬಿಗ್ ಬಜೆಟ್ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟಿಸಿರುವ “ಕಾಟೇರ” ಚಿತ್ರದ ನಾಯಕಿಯಾಗಿ ಆರಾಧನಾ ರಾಮ್ ಅವರು ನಟಿಸುತ್ತಿದ್ದಾರೆ. ಸದ್ಯ ಚಿತ್ರದ ಆರಾಧನಾ ಲುಕ್ ಕೂಡ ರಿವೀಲ್ ಆಗಿದ್ದು, ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮ್ಮ ಮೊದಲ ಚಿತ್ರದಲ್ಲಿಯೇ ಪವರ್​ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾಯಿ ಮಾಲಾಶ್ರೀ ಅಂತೆಯೇ ನಾಯಕಿಯಾಗಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.

ತಾವೆಲ್ಲರೂ ಆರಾಧನಾ ಹೆಸರನ್ನೇ ಬಳಸಿಕೊಳ್ಳಬೇಕು ಎಂದು ಮಾಲಾಶ್ರೀ ಅವರು ವಿನಂತಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES