ರಾಮನಗರ : ರಾಮನಗರ ಅಭಿವೃದ್ಧಿನೇ ಆಗಿಲ್ಲ ಅಂತ ಇಲ್ಲಿಯ ಶಾಸಕ ಹೇಳ್ತಾನೆ ಎಂದು ಕಾಂಗ್ರೆಸ್ ಶಾಸಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೊದಲು ಚುನಾವಣೆಗೂ ಮುನ್ನ ಅದ್ಯಾವುದೋ ಗಿಫ್ಟ್ ಕಾರ್ಡ್ ಕೊಟ್ಟಿದ್ದಲ್ಲಪ್ಪ. ಅದನ್ನು ಫಸ್ಟ್ ಜನರಿಗೆ ತಲುಪಿಸು. 3 ಸಾವಿರ, 5 ಸಾವಿರದ ಕೂಪನ್ ಕೊಟ್ಟಿದ್ರಲ್ಲ, ಏನಾಯ್ತು?ಎಂದು ಪ್ರಶ್ನೆ ಮಾಡಿದ್ದಾರೆ.
ರಾಮನಗರ ದೇವೇಗೌಡರ ಕುಟುಂಬ ಬರೋದಕ್ಕೂ ಮುಂಚೆ ಹೇಗಿತ್ತು. ಈಗ ಹೇಗಿದೆ ಅನ್ನೋದನ್ನ ನೋಡಲಿ. ಸರ್ವೇ ಪ್ರಕಾರ ರಾಮನಗರ ಜಿಲ್ಲೆ ರಾಜ್ಯದಲ್ಲಿ ಕಡಿಮೆ ಬಡತನ ರೇಖೆ ಹೊಂದಿದೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಇದು ದೇವೇಗೌಡರ ಕುಟುಂಬ ಕೊಟ್ಟಿರೋ ಕೊಡುಗೆ. ನಾವು ಮಾಡಿರುವ ಕೆಲಸಕ್ಕೆ ಮೊದಲು ಸಣ್ಣ ಬಣ್ಣ ಹೊಡೆಸಿ ಸಾಕು. ಹೊಸ ಕೆಲಸ ತರೋದು ಬೇಕಾಗಿಲ್ಲ ಎಂದು ಗುಡುಗಿದ್ದಾರೆ.
ಶೀಘ್ರದಲ್ಲೇ ತೆಗೆದು ಮುಂದೆ ಇಡ್ತೀನಿ
ನೈಸ್ ರಸ್ತೆ ವಿಚಾರ ಕುರಿತು ಸಂಸದ ಡಿ.ಕೆ. ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ನೈಸ್ ಕಂಪನಿ ಜೊತೆ ವ್ಯವಹಾರ ಮಾಡಿದ್ದಾರೆ ಅಂತ ಹೇಳಿದ್ದಾರೆ. ಯಾರು ವ್ಯವಹಾರ ಮಾಡಿದ್ದಾರೆ ಅಂತ ಗೊತ್ತು. ರೈತರ ಹತ್ತಿರ ಲೂಟಿ ಹೊಡ್ಕೊಂಡು ಕೂತಿದ್ದಾರೆ. ಶೀಘ್ರದಲ್ಲೇ ಎಲ್ಲವನ್ನೂ ತೆಗೆದು ಜನರ ಮುಂದೆ ಇಡ್ತೀನಿ ಎಂದು ಡಿಕೆ ಬ್ರದರ್ಸ್ ವಿರುದ್ಧವೂ ಕುಮಾರಣ್ಣ ವಾಗ್ದಾಳಿ ನಡೆಸಿದ್ದಾರೆ.