Sunday, December 22, 2024

ಸುಮ ಮೇಡಂ ಬಗ್ಗೆ ನಾನು ಮಾತಾಡಲ್ಲ : ಚಲುವರಾಯಸ್ವಾಮಿ

ಮಂಡ್ಯ : ಸಂಸದೆ ಸುಮಲತಾ ಮೇಡಂ ಬಗ್ಗೆ ನಾನು ರಾಜಕೀಯವಾಗಿ ಮಾತಾಡಲ್ಲ. ಅವರು ಸಂಸದರಾಗಿದ್ದಾರೆ. ನೇರವಾಗಿ ನೀರಾವರಿ ಸಚಿವರ ಜೊತೆ ಮಾತಾಡ್ಬೇಕು, ಸಮಸ್ಯೆ ಬಗೆಹರಿಸಲಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.

ನಾಳೆ ಸಂಸದೆ ಸುಮಾಲತಾ ಹಾಗೂ ಬಿಜೆಪಿ ಪ್ರತಿಭಟನೆ ಕರೆ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿದ ಅವರು, ಸಂಸದರ ಹುಡುಗರುಗಳು ಪ್ರತಿಭಟನೆ ವಿಚಾರ ಹೇಳಿಲ್ಲ. ಅವರು ಪ್ರತಿಭಟನೆ ಮಾಡಿದಾಗ ಮಾಡಬೇಡಿ ಎಂದು ಹೇಳಲು ಹಾಗಲ್ಲ. ಸರ್ಕಾರ ರೈತರ ಪರ ನಿಲ್ಲುವ ಜವಾಬ್ದಾರಿ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ರಾಮನಗರ ಯಾರಪ್ಪನ ಆಸ್ತಿ ಅಲ್ಲ : ಕುಮಾರಸ್ವಾಮಿ

ಬೇಕು ಅಂತಲೇ ಕೆಲವರು ಕಿತಾಪತಿ ಮಾಡಲು ನಿಂತಿದ್ದಾರೆ. ಚಲುವರಾಯಸ್ವಾಮಿ ಇನ್ನೊಬ್ಬರ ದ್ವೇಷಕ್ಕೋಸ್ಕರ ರಾಜಕಾರಣ ಮಾಡಲ್ಲ. ಐದು ವರ್ಷ ಸೋತಾಗ ಅವರು ಏಳು ಜನ ಗೆದ್ದರು. ಅವರ ಬಗ್ಗೆ ನಾನು ಯಾವತ್ತೂ ಮಾತನಾಡಿಲ್ಲ. ಒಂದು ಗುತ್ತಿಗೆದಾರರ ಪೇಮೆಂಟ್ ಹಾಗಿಲ್ಲ. ಕೆಲಸ ಹಾಗಿರಲಿಲ್ಲ. ನಾವು ಯಾವತ್ತು ಅವರಿಗೆ ದೂರಿದ್ವಾ? ಎಂದು ದಳಪತಿ ವಿರುದ್ಧ ಗುಡುಗಿದ್ದಾರೆ.

ಜನರು ಅವಕಾಶ ಕೊಟ್ಟಿದ್ದಾರೆ ನಾವು ಕೆಲಸ ಮಾಡಬೇಕು. ಇನ್ನೊಬ್ಬರ ಬಗ್ಗೆ ಟೀಕೆ ಮಾಡ್ಕೊಂಡು ನಿಂತಿದ್ದಿವಾ? ಚಲುವರಾಯಸ್ವಾಮಿ ದ್ವೇಷ ರಾಜಕಾರಣ ಮಾಡಲ್ಲ ಎಂದು ನಯವಾಗಿಯೇ ತಿರುಗೇಟು ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES