Sunday, January 19, 2025

ಕಲರ್ ಕಲರ್ ಫೋಟೋ ಹಾಕೊಂಡು ಫೋಸ್ ಕೊಟ್ಟಿದ್ದಾರಲ್ಲ : ಕುಮಾರಸ್ವಾಮಿ

ರಾಮನಗರ : ರಾಮನಗರ ಕುಡಿಯುವ ನೀರಿಗೆ 460 ಕೋಟಿ ಪ್ರಪೋಸಲ್ ತಂದಿದ್ದು ನಾನು. ಏನ್ ಡಿ.ಕೆ. ಶಿವಕುಮಾರ್ ತಂದಿದ್ರಾ ಅದನ್ನ? ಕಲರ್ ಕಲರ್ ಫೋಟೋ ಹಾಕೊಂಡು ಫೋಸ್ ಕೊಟ್ಟಿದ್ದಾರಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಮನಗರಕ್ಕೆ ಕುಡಿಯುವ ನೀರಿನ ಯೋಜನೆ ಮಾಡ್ತೀವಿ ಅಂತ ಹೇಳ್ತಿದ್ದಾರೆ. ಅದೇನೋ ಅದು ಡಿ.ಕೆ. ಶಿವಕುಮಾರ್ ಕನಸಿನ ಕೂಸು ಅಂತಲ್ಲ. 50 ಕೋಟಿ 60 ಕೋಟಿ ಇದ್ದ ಆಸ್ತಿಯನ್ನ 1,500 ಕೋಟಿ ಮಾಡ್ಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ದೇವೇಗೌಡರ ಕಾಲದಲ್ಲೇ ರಾಮನಗರ ಹಾಗೂ ಚನ್ನಪಟ್ಟಣಕ್ಕೆ ಕುಡಿಯುವ ನೀರು ತರಲಾಯಿತು. ರಾಮನಗರ ಬೆಳೆಯುತ್ತಿರುವ ನಿಟ್ಟಿನಲ್ಲಿ ನಾನು ಹಣಕಾಸು ಮಂತ್ರಿಯಾಗದಾ ಹೆಚ್ಚುವರಿ ಯೋಜನೆ ಮಾಡಿದ್ದೇವೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕುಡಿಯುವ ನೀರಿಗೆ ಇವರ ಕೊಡುಗೆ ಏನು? ಆಗ ಯಾಕೆ ನೀರು ತರಲಿಲ್ಲ, ಬಂಡೆ ಹೊಡ್ಕೊಂಡು ಕೂತಿದ್ರಾ? ಸಾಕ್ಷಿ ಗುಡ್ಡೆಗಳನ್ನ ರೆಡಿ ಮಾಡ್ಕೊಂಡು ಕೂತಿದ್ರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಲು ಬಂಡೆ ಚೀನಾಗೆ ಸಾಗಿಸಿದ್ದೇ ಸಾಕ್ಷಿ

ಅಭಿವೃದ್ಧಿ ಮಾಡಿರೋದರ ಬಗ್ಗೆ ಸಾಕ್ಷಿ ಗುಡ್ಡೆ ಕೇಳ್ತಾರೆ. ಕುಮಾರಸ್ವಾಮಿಯ ಅಭಿವೃದ್ಧಿ ಸಾಕ್ಷಿಗುಡ್ಡೆ ಎಲ್ಲಾ ಕಡೆ ಇದೆ. ಇವರದ್ದು ಏನಿದೆ? ಕಲ್ಲು ಬಂಡೆ ಹೊಡೆದು ಚೀನಾಗೆ ಸಾಗಿಸಿದ್ದೇ ಇವರ ಸಾಕ್ಷಿ ಗುಡ್ಡೆ. ಮೊದಲು ಲಘುವಾಗಿ ಮಾತಮಾಡುವುದನ್ನ ಬಿಡಲಿ. ಅನಿತಾ ಕುಮಾರಸ್ವಾಮಿ ತಂದಿರೋ ಅನುದಾನದಲ್ಲಿ ಕೆಲಸ ಮಾಡ್ತಿದ್ದಾರೆ. ಒಂದು ರೂಪಾಯಿ ಬಿಡುಗಡೆ ಮಾಡಿಸಿ ಕೆಲಸ ಮಾಡಿದ್ದಾರಾ? ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES