Sunday, November 24, 2024

ಆ.23 ಸಂಜೆ 6.04 : ಚಂದ್ರಯಾನ-3 ಲ್ಯಾಂಡಿಂಗ್ ಟೈಮ್ ಫಿಕ್ಸ್

ಬೆಂಗಳೂರು : ಆಗಸ್ಟ್ 23 ಸಂಜೆ 6.04. ಈ ದಿನಾಂಕ ಹಾಗೂ ಸಮಯವನ್ನು ಎಲ್ಲರೂ ಸೇವ್ ಮಾಡಿ ಇಟ್ಟುಕೊಳ್ಳಬೇಕು. ದೇಶವಲ್ಲದೇ ಇಡೀ ವಿಶ್ವದ ಚಿತ್ತ ಭಾರತದತ್ತ ನೆಟ್ಟಿದೆ.

ವಿಕ್ರಮ್ ಲ್ಯಾಂಡರ್​ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯು ಚಂದ್ರನ ಮೇಲೆ ಆಗಸ್ಟ್ 23ರಂದು ಸಂಜೆ 5.45ಕ್ಕೆ ಕಡಿಮೆ ದೂರದಿಂದ ಅಂದರೆ 25 ಕಿಮೀ ಎತ್ತರದಿಂದ ಪ್ರಾರಂಭವಾಗುವ ನಿರೀಕ್ಷೆಯಿದ್ದು, 6.04ರಂದು ಲ್ಯಾಂಡ್ ಆಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತಿಳಿಸಿದೆ.

ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಮಾಡ್ಯೂಲ್ ಜುಲೈ 14 ರಂದು ಭೂಮಿಯಿಂದ ಹೊರಟ ಭಾರತದ ನಿರ್ಣಾಯಕ ಚಂದ್ರನ ಕಾರ್ಯಾಚರಣೆಯಲ್ಲಿ ಎರಡನೇ ಮತ್ತು ಅಂತಿಮ ಡೀಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ ಎಂದು ಹೇಳಿದೆ.

ಮುಂದಿನ ಹಂತದಲ್ಲಿ, ಲ್ಯಾಂಡರ್ ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗುತ್ತದೆ. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿಯುವ ಗುರಿಯನ್ನು ಹೊಂದಿದ್ದ ಚಂದ್ರಯಾನ-2ರ ಅನುಸರಣಾ ಕಾರ್ಯಾಚರಣೆಯಾಗಿದೆ ಎಂದು ತಿಳಿಸಿದೆ.

ಪ್ರಧಾನಿ ಮೋದಿ ಪ್ರಾರ್ಥನೆ

ಚಂದ್ರನತ್ತ ಇಳಿಯಲು ಭಾರತದ ನೌಕೆ ಯಶಸ್ವಿಯತ್ತ ಸಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಚಂದ್ರಯಾನ-3 ನೌಕೆಯು ಚಂದ್ರನ ಮೇಲೆ ಸುರಕ್ಷಿತ ಇಳಿಯುವಿಕೆಗಾಗಿ ಪ್ರಾರ್ಥಿಸುತ್ತಿದ್ದೇನೆ’ ಎಂದಿದ್ದಾರೆ. ಬಾಹ್ಯಾಕಾಶ ನೌಕೆಗೆ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಚಂದ್ರನತ್ತ ಕಾಲಿಡುತ್ತಿರುವ ನಮ್ಮ ನೌಕೆಯ ಬಗ್ಗೆ ನಾನು ಉತ್ಸುಕನಾಗಿದ್ದೇನೆ ಎಂದು ಇಸ್ರೋ ಸಾಧನೆ ಬಗ್ಗೆ ಶುಭ ಕೋರಿದ್ದಾರೆ.

RELATED ARTICLES

Related Articles

TRENDING ARTICLES