Friday, December 27, 2024

BJP-JDSನಿಂದ ತಲಾ 10 ಶಾಸಕರು ಬರ್ತಾರೆ : ಸತೀಶ್ ಜಾರಕಿಹೊಳಿ

ಚಾಮರಾಜನಗರ : ಬಿಜೆಪಿ ಹಾಗೂ ಜೆಡಿಎಸ್​ನಿಂದ ತಲಾ ಹತ್ತು ಶಾಸಕರು ಕಾಂಗ್ರೆಸ್​ ಪಕ್ಷಕ್ಕೆ ಬರ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಆಪರೇಷನ್ ಹಸ್ತ ವಿಚಾರವಾಗಿ ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಶನ್ ಕಾಂಗ್ರೆಸ್ ಚರ್ಚೆ ನಡೆಯುತ್ತಿರುವುದು ನಿಜ ಎಂದು ಹೇಳಿದ್ದಾರೆ.

ಬಿಜೆಪಿ ಭಯ ದಿನದ 24 ಗಂಟೆಯೂ ಇದ್ದೆ ಇರುತ್ತೆ. ನಾವು ಸರ್ಕಾರವನ್ನು ಡಿಸ್ಟರ್ಬ್ ಮಾಡುತ್ತಿಲ್ಲ. ನಾವು ಯಾವುದೇ ಸರ್ಕಾರ ಬೀಳಿಸುತ್ತಿಲ್ಲ, ಅವರೇ ಬರ್ತೀವಿ ಎನ್ನುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಯಿಂದ ತಲಾ ಹತ್ತು ಶಾಸಕರು ಬರ್ತಾರೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಈಗ ವಾತಾವರಣ ಬದಲಾಗಿದೆ

ಪಕ್ಷ ತೊರೆದವರನ್ನು ಮತ್ತೆ ಪಕ್ಷಕ್ಕೆ  ಸೇರಿಸಿಕೊಳ್ಳುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಆವಾಗ ಹೇಳಿದ್ರು, ಆದ್ರೆ ಇವಾಗ ರಾಜಕೀಯ ಅನಿವಾರ್ಯತೆ ಇದೆ. ಇವತ್ತಿನದು ನಾಳೆಗೆ ಹೇಳೋಕೆ ಆಗಲ್ಲ, ಬದಲಾವಣೆ ಆಗುತ್ತಲೇ ಇರುತ್ತೆ. ಆದರೆ, ಈಗ ವಾತಾವರಣ ಬದಲಾಗಿದೆ. ಕೆಲವರು ಪಕ್ಷ ತ್ಯಜಿಸಿ ಈಗ ಪಶ್ಚಾತಾಪ ಮಾಡುತ್ತಿದ್ದಾರೆ. ಈಗ ಅವರನ್ನ ಸೇರಿಸಿಕೊಳ್ಳುವುದು ಅಭ್ಯಂತರವಿಲ್ಲ ಎಂಬುವುದು ನನ್ನ ಭಾವನೆ ಎಂದು ಪರೋಕ್ಷವಾಗಿ ವಲಸಿಗ ಶಾಸಕರಿಗೆ ಆಹ್ವಾನ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES