Monday, December 23, 2024

ಬೇರೆ ಏರಿಯಾದಲ್ಲಿ ಪ್ಯಾಸೆಂಜರ್ ಪಿಕ್ ಮಾಡಿದ್ದಕ್ಕೆ ಹಿಗ್ಗಾಮುಗ್ಗ ಥಳಿತ

ಬೆಂಗಳೂರು : ಪ್ಯಾಸೆಂಜರ್ ವಿಚಾರವಾಗಿ ಆಟೋ ಡ್ರೈವರ್​ಗಳ ನಡುವೆ ಡಿಶುಂ.. ಡಿಶುಂ ನಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಾಗಸಂದ್ರ ಮೆಟ್ರೋ ಸ್ಟೇಷನ್‌ ಬಳಿ ಆಟೋ ತಡೆದು ಚಾಲಕನನ್ನ ಹಿಗ್ಗಾಮುಗ್ಗ ಥಳಿಸಿದ್ದಾರೆ. ತನ್ನ ಏರಿಯಾ ಬಿಟ್ಟು ಬೇರೆ ಏರಿಯಾದಲ್ಲಿ ಪ್ಯಾಸೆಂಜರ್ ಪಿಕ್ ಮಾಡಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಆಟೋ ಚಾಲಕ ತನ್ನ ಏರಿಯಾ ಬಿಟ್ಟು ಬೇರೆ ಏರಿಯಾದಲ್ಲಿ ಪ್ಯಾಸೆಂಜರ್ ಪಿಕ್ ಮಾಡಿದ ಎಂಬ ಕಾರಣಕ್ಕೆ ಇತರೆ ನಾಲ್ಕೈದು ಆಟೋ ಚಾಲಕರು ಫಾಲೋ ಮಾಡಿಕೊಂಡು ಬಂದು ಆಟೋ ತಡೆದು ಚಾಲಕನನ್ನ ಹಿಗ್ಗಾಮುಗ್ಗ ಥಳಿಸಿದ್ದಾರೆ.

ನಿಮ್ಮ ಏರಿಯಾ ಯಾವುದು?

ನಿಮ್ಮ ಏರಿಯಾ ಯಾವುದು? ಯಾಕೆ ನಮ್ಮ ಏರಿಯಾದಲ್ಲಿ ಪ್ಯಾಸೆಂಜರ್​ನ ಪಿಕ್ ಮಾಡಿದೆ ಎಂದು ನಾಲ್ಕೈದು ಆಟೋ ಡ್ರೈವರ್​ಗಳು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರಂತೆ. ಹಲ್ಲೆ ಮಾಡಿ ಬೆದರಿಕೆ ಹಾಕುವ ದೃಶ್ಯ ಹಿಂದೆ ಬರ್ತಿದ್ದ ಕಾರಿನ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಲಾಟೆ ಆಗುತ್ತಿರುವುದನ್ನು ನೋಡಿ ಪ್ರಯಾಣಿಕ ಆಟೋ ಇಳಿದಿದ್ದಾನೆ.

ಬೇರೆ ಏರಿಯಾದಲ್ಲಿ ಪಿಕ್ ಮಾಡಬಾರದ?

ಸದ್ಯ ಶುಭಮ್ ಗುಪ್ತ ಎಂಬ ವ್ಯಕ್ತಿ ಈ ಘಟನೆ ಸಂಬಂಧ ವಿಡಿಯೋ ಸಮೇತ ಬೆಂಗಳೂರು ಪೊಲೀಸ್ ಪೇಜ್​ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಆಟೋ ಡ್ರೈವರ್​ಗಳು ಪ್ರಯಾಣಿಕರನ್ನ ಬೇರೆ ಏರಿಯಾದಲ್ಲಿ ಪಿಕ್ ಮಾಡಬಾರದ? ಆ ರೀತಿಯ ರೂಲ್ಸ್ ಏನಾದ್ರೂ ಇದೀಯಾ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ವಿಡಿಯೋ ಆಧರಿಸಿ ಘಟನೆ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

RELATED ARTICLES

Related Articles

TRENDING ARTICLES