ಬೆಂಗಳೂರು : ದ್ವಿತೀಯ ಪಿಯುಸಿ ಎರಡನೇ ಪೂರಕ ಪರೀಕ್ಷೆ ಆಗಸ್ಟ್ 21 ರಿಂದ ಆರಂಭವಾಗುತ್ತಿದ್ದು ಪಿಯು ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆ ಸಿಹಿಸುದ್ದಿ ನೀಡಿದೆ.
ಇದನ್ನು ಓದಿ: ಆಟೋ ಚಾಲಕನ ಉಸಿರು ನಿಲ್ಲಿಸಿದ ಕಿಲ್ಲರ್ KSRTC
ಪೂರಕ ಪರೀಕ್ಷೆ-2 ಬರೆಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಗಸ್ಟ್ 21 ರಿಂದ ಸೆಪ್ಟೆಂಬರ್ 02 ರ ವರೆಗೂ ಉಚಿವ ಸಾರಿಗೆ ಬಸ್ ಸೇವೆ ವ್ಯವಸ್ಥೆಯನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ. ಹಾಲ್ ಟಿಕೆಟ್ ತೋರಿಸಿದ್ರೆ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಮಾಡಬಹುದಾಗಿದೆ.
ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನಗರದ ಬೇರೆ ಬೇರೆ ಸ್ಥಳಕ್ಕೆ ಸಂಚರಿಸಬೇಕಾದ ಅನಿವಾರ್ಯತೆ ಇರುವ ಹಿನ್ನಲೆ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದ ಸಾರಿಗೆ ಇಲಾಖೆಯೂ ವಿದ್ಯಾರ್ಥಿಗಳ ವಾಸ ಸ್ಥಳದಿಂದ ಪರೀಕ್ಷೆ ಕೇಂದ್ರದ ವರೆಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದು ಈ ಉಚಿತ ಸೇವೆಯನ್ನು ಪಡೆಯಲು ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದೆ.