ಬೆಂಗಳೂರು : ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ( ಮೆಜೆಸ್ಟಿಕ್ ) ರೈಲುನಿಲ್ದಾಣದಲ್ಲಿ ರೈಲು ಬೋಗಿಗಳಿಗೆ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯು ಎಲೆಕ್ಟ್ರಿಕಲ್ ನಿಂದ ಆಗಿದ್ಯ ಅಥವಾ ಸಿಗರೇಟ್ನಿಂದ ಆಗಿದೆಯಾ ಅಥವಾ ಇಂಟರ್ನಲ್ ಸಮಸ್ಯೆಯಿಂದ ಆಗಿದೆಯಾ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ ಎಂದು ಅಗ್ನಿಶಾಮಕ ದಳ ಎಡಿಜಿಪಿ ಹರಿಶೇಖರನ್ ತಿಳಿಸಿದರು.
ಇದನ್ನೂ ಓದಿ: ಮಳೆಗಾಗಿ ದೇವರ ವಿಗ್ರಹಕ್ಕೆ ಬೆಂಕಿ!: ವಿಚಿತ್ರ ಆಚರಣೆ
ಕಾಂತ್ರಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಕಿ ಅವಘಡದ ಕುರಿತು ಇಂದು ಬೆಳ್ಳಗೆ 7.20ರ ಸುಮಾರಿಗೆ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ ಉದ್ಯಾನ್ ಎಕ್ಸ್ಪ್ರೆಸ್ನಲ್ಲಿ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ನಮಗೆ ವಿಚಾರ ಗೊತ್ತಾಗಿದೆ. ನಂತರ ಹೈಗ್ರೌಂಡ್ಸ್ ಫೈರ್ ಸ್ಟೇಷನ್ ನಿಂದ ಐದು ಅಗ್ನಿಶಾಮಕ ವಾಹನಗಳನ್ನ ಘಟನಾ ಸ್ಥಳಕ್ಕೆ ಕಳಿಸಲಾಗಿತ್ತು, ನಮ್ಮ ಸಿಬ್ಬಂದಿ ಸಂಪೂರ್ಣವಾಗಿ ಬೆಂಕಿ ನಿಂದಿಸುವ ಕೆಲಸ ಮಾಡಿದ್ದಾರೆ ಎಂದರು.
ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ. ಸದ್ಯ ಈ ಘಟನೆಯೂ ರೈಲ್ವೆ ನಿಲ್ದಾಣದಲ್ಲಿ ರೈಲು ನಿಂತಾಗ ನಡೆದಿದೆ, ಅದೇ ಚಲಿಸುವ ವೇಳೆ ಸಂಭವಿಸಿದ್ದರೇ ಭಾರಿ ಅನಾಹುತವೇ ಸಂಭವಿಸುತ್ತಿತ್ತು. ಎರಡುಎಸಿ ಬೋಗಿಗಳಿಗೆ ಹಾನಿಯಾಗಿದೆ. ರೈಲ್ವೇ ಪೊಲೀಸರಿಂದ ಅಗ್ನಿ ಅವಘಡದ ತನಿಖೆ ನಡೆಯುತ್ತಿದ್ದು ಡಾಗ್ ಸ್ವಾಡ್ ಬಳಸಿ ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.