Wednesday, April 2, 2025

ಮಹಿಳೆ ಮೇಲೆ ಕಾಡಾನೆ ದಾಳಿ ; ಗಂಭೀರ ಗಾಯಗೊಂಡ ಗೃಹಿಣಿ

ಹಾಸನ : ಒರ್ವ ಮಹಿಳೆ ಮೇಲೆ ಕಾಡಾನೆ ದಾಳಿ ಮಾಡಿರುವ ಹಿನ್ನೆಲೆ ಗಂಭೀರ ಗಾಯಗೊಂಡಿರೋ ಮಹಿಳೆ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ವಡೂರು ಗ್ರಾಮದಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪೂರ್ಣಿಮ (40) ಗಾಯಗೊಂಡ ಮಹಿಳೆ. ಇಂದು ಬೆಳ್ಳಂಬೆಳಗ್ಗೆ ಮನೆ ಮುಂದೆ ಕೆಲಸ ಮಾಡುತ್ತಿದ್ದ, ವೇಳೆ ಕಾಡಾನೆ ಒಂದು ಮನೆಯ ಹತ್ತಿರವೇ ಬಂದು ಮಹಿಳೆ ಮೇಲೆ ದಾಳಿ ಮಾಡಿದೆ.

ಇದನ್ನು ಓದಿ : ಅಕ್ಕಿ ಬೆಲೆ ಏರಿಕೆ : ಜನಸಾಮಾನ್ಯರಿಗೆ ಮತ್ತೆ ದರ ಏರಿಕೆ ಶಾಕ್!

ಕಾಡಾನೆ ಅಟ್ಯಾಕ್ ಮಾಡಿರೊ ಹಿನ್ನೆಲೆ ಮಹಿಳೆಯ ಮುಖ ಹಾಗೂ ದೇಹದ ಭಾಗದವನ್ನು ತುಳಿದು ಗಾಯಾಗೊಳಿಸಿರುವ ಆನೆ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್​ ಆಸ್ಪತ್ರೆಗೆ ರವಾನಿಸಲಾಗಿದೆ.

RELATED ARTICLES

Related Articles

TRENDING ARTICLES