Wednesday, January 22, 2025

ನಾನು ಅವ್ರನ್ನ ಭೇಟಿಯಾಗಿದ್ರೆ ನೇಣು ಹಾಕಿಕೊಳ್ತಿನಿ : ಕೆ. ಗೋಪಾಲಯ್ಯ

ಬೆಂಗಳೂರು : ನನಗೆ ಸಾವಿರಕ್ಕೂ ಹೆಚ್ಚು ಕಾಲ್​ಗಳು ಬರ್ತಾ ಇವೆ. ನಾನು ಯಾರನ್ನೂ ಭೇಟಿ ಮಾಡಿಲ್ಲ. ಸಿಎಂನೂ ಕೂಡ ಭೇಟಿ ಮಾಡಿಲ್ಲ. ನಾನು ಭೇಟಿಯಾಗಿದ್ರೆ ನೇಣು ಹಾಕಿಕೊಳ್ತೀನಿ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ. ಗೋಪಾಲಯ್ಯ ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ ಹೋಗೋ ಪ್ರಶ್ನೆಯೇ ಇಲ್ಲ. ನನ್ನ ತೇಜೋವಧೆ ಮಾಡಬೇಡಿ. ಇನ್ನೂ ಐದು ವರ್ಷ ಬಿಜೆಪಿಯಲ್ಲೇ ಇರುತ್ತೇವೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಾಸಕ ಮುನಿರತ್ನ ಮಾತನಾಡಿ, ಬೈರತಿ‌ ಬಸವರಾಜ ಕರೆ ಮಾಡಿದ್ದರು. ನಾವು ಎಂತಹದೇ ಸಮಯದಲ್ಲಿ ಪಕ್ಷ ಬಿಡುವುದಿಲ್ಲ ಎಂದು ತಿಳಿಸಲು ಹೇಳಿದ್ದಾರೆ. ಯಾರೂ ಪಕ್ಷ ಬಿಟ್ಟು ಹೋಗಲ್ಲ. ಬೈರತಿ‌ ಬಸವರಾಜ, ಕೆ. ಗೋಪಾಲಯ್ಯ, ನಾನು ಪಕ್ಷ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಭೆಯಲ್ಲಿ ಭಾಗಿಯಾಗಿದ್ದವರು

ಡಾಲರ್ಸ್ ಕಾಲೋನಿಯ ಡಾ.ಬಿ.ಎಸ್‌ ಯಡಿಯೂರಪ್ಪ ಅವರ ನಿವಾಸದಲ್ಲಿ ಬೆಂಗಳೂರಿನ ಬಿಜೆಪಿ ಸಂಸದರು ಮತ್ತು ಶಾಸಕರ ಸಭೆ ನಡೆಯಿತು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌, ಶಾಸಕರಾದ ಆರ್.‌ ಅಶೋಕ್, ಮುನಿರತ್ನ, ಕೆ. ಗೋಪಾಲಯ್ಯ, ಎಸ್.ಆರ್.ವಿಶ್ವನಾಥ್, ಉದಯ ಗರುಡಾಚಾರ್, ಡಾ.ಸಿ.ಎನ್.ಅಶ್ವತ್ಥ್‌ ನಾರಾಯಣ, ಎಸ್.ರಘು, ಎಸ್.ಮುನಿರಾಜು, ಎಂಎಲ್​ಸಿ ರವಿಕುಮಾರ್‌, ಸಂಸದರಾದ ಡಿ.ವಿ ಸದಾನಂದಗೌಡ, ಪಿ.ಸಿ. ಮೋಹನ್, ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಭಾಗಿಯಾಗಿದ್ದರು.

RELATED ARTICLES

Related Articles

TRENDING ARTICLES