Monday, December 23, 2024

ಹೃದಯಾಘಾತಕ್ಕೆ ಕಿರುತರೆ ಯುವ ನಟ ಬಲಿ

ಮಂಡ್ಯ : ಜಿಲ್ಲೆಯ ಮೂಲಕ ಕಲಾವಿದನಾಗಿದ್ದ ಕಿರುತರೆ ಕಲಾವಿದ ಪವನ್ ಅವರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಹರಿಹರಪುರ ಗ್ರಾಮದ ಪವನ್ ಎಂಬುವವರು ಹಿಂದಿ ಮತ್ತು ತಮಿಳು ಕಿರುತರೆಯಲ್ಲಿ ಕಲಾವಿದರಾಗಿ ಹೊರಹೊಮ್ಮುತ್ತಿದ್ದರು. ದುರಾದೃಷ್ಟವಶಾತ್ ನಿನ್ನೆ (ಗುರುವಾರ) ಮುಂಬೈನಲ್ಲಿ ನಸುಕಿನ ಜಾವ ಹೃದಯಾಘಾತದಿಂದ ಅಸುನಿಗಿದ್ದಾರೆ.

ಇದನ್ನು ಓದಿ : ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದಲ್ಲಿ ಬಾಲಹುಳಗಳು ಪತ್ತೆ

ಕಲಾವಿದರಾಗಿ ಹೊರಹೊಮ್ಮಿದ ಬಳಿಕ ತಮ್ಮ ತಂದೆ ನಾಗರಾಜು ಹಾಗೂ ಅವರ ತಾಯಿ ಸರಸ್ವತಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದರು. ಇನ್ನು ಬೆಳ್ಳಿ ತೆರೆ ಚಿತ್ರಗಳಲ್ಲಿ ಅಭಿನಯಿಸುವ ಕನಸ್ಸು ಕಂಡಿದ್ದ ಯುವನಟ ನಿನ್ನೆ ಎಲ್ಲಾರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಂದೂ ಅವರ ಹುಟ್ಟೂರಾದ ಹರಿಹರಪುರದಲ್ಲಿ ಯುವ ನಟನ ಅಂತ್ಯಸಂಸ್ಕಾರ ನಡೆಯಲಿದೆ.

RELATED ARTICLES

Related Articles

TRENDING ARTICLES