Monday, December 23, 2024

ಪಾಪರ್ ಆಗಿದೆ ಈ ಸರ್ಕಾರ : BSY ಗುಡುಗು

ಬೆಂಗಳೂರು : ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪಾಪರ್ ಆಗಿದೆ ಈ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭ್ರಷ್ಟಾಚಾರ ಮಿತಿ ಮೀರಿದ್ದು, ಆಗಸ್ಟ್​ 23ರಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.C

ಅಭಿವೃದ್ಧಿ ಕಾರ್ಯ ನಡೀತಿಲ್ಲ. ಒಂದು ಕಿಲೋ ಮೀಟರ್ ರಸ್ತೆ ಮಾಡಿದ್ದಾರಾ? ಖಜಾನೆಯನ್ನು ಲೂಟಿ ಮಾಡುವಂತ ಕೆಲಸ ಸರ್ಕಾರ ಮಾಡ್ತಾ ಇದೆ. ಹಗಲುದರೋಡೆ ಮಾಡ್ತಾ ಇದೆ ಈ ಸರ್ಕಾರ. ವರ್ಗಾವಣೆ ದಂಧೆ, ಅಧಿಕಾರಿಗಳಿಂದ ತಿಂಗಳಿಗೆ ಇಂತಿಷ್ಟು ಹಣ ಕೊಡಬೇಕು. ಬಿಬಿಎಂಪಿ ಚುನಾವಣೆ ಹಿನ್ನೆಲೆ ಇಷ್ಟಬಂದಂತೆ ವಾರ್ಡ್ ವಿಂಗಡನೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಯಾರೂ ಕಾಂಗ್ರೆಸ್​ಗೆ ಹೋಗಲ್ಲ

ಬಿಜೆಪಿ ಶಾಸಕರು ಕಾಂಗ್ರೆಸ್​ಗೆ ಹೋಗುತ್ತಾರೆ ಎಂಬ ವದಂತಿ ಬಗ್ಗೆ ಮಾತನಾಡಿದ ಅವರು, ಶಾಸಕ ಎಸ್.ಟಿ ಸೋಮಶೇಖರ್ ಅನಿವಾರ್ಯ ಕಾರಣದಿಂದ ಸಭೆಗೆ ಬಂದಿಲ್ಲ. ಬಿಜೆಪಿಯ ಯಾವೊಬ್ಬ ಶಾಸಕರೂ ಕಾಂಗ್ರೆಸ್​ ಪಕ್ಷಕ್ಕೆ ಹೋಗಲ್ಲ. ಪಕ್ಷ ಬಿಟ್ಟು ಹೋಗೋರು ಇಲ್ಲ. ಒಬ್ಬರು ಇಬ್ಬರು ಆಲೋಚನೆ ಮಾಡಿದ್ದಾರೆ. ಅಂತವರನ್ನು ಕರೆಸಿ ಮಾತನಾಡ್ತೀನಿ ಎಂದು ಯಡಿಯೂರಪ್ಪ ಹೇಳಿದ್ದಾರೆ.

RELATED ARTICLES

Related Articles

TRENDING ARTICLES